ಕಾಂಗ್ರೆಸ್​ ಗೆ ಬಂದರೆ ಫಸ್ಟ್ ಬೆಂಚ್ ಸಿಗಲ್ಲ ಎಂಬ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ಶಾಸಕ ಎಸ್.ಟಿ ಸೋಮಶೇಖರ್ ತಿರುಗೇಟು.

ಬೆಂಗಳೂರು,ಆಗಸ್ಟ್,17,2023(www.justkannada.in): ಕಾಂಗ್ರೆಸ್​ ಗೆ ಬಂದರೆ ಫಸ್ಟ್ ಬೆಂಚ್ ಸಿಗಲ್ಲ ಎಂಬ ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಮಾಜಿ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಎಸ್.ಟಿ ಸೋಮಶೇಖರ್, ಡಿಸಿಎಂ ಆಗಿದ್ಧ ಪರಮೇಶ್ವರ್ ಈಗ ಎಲ್ಲಿದ್ದಾರೆ ನೋಡಿಕೊಳ್ಳಲಿ.  ಪರಮೇಶ್ವರ್ ಕರೆಕ್ಟ್ ಆಗಿ ಇರುತ್ತಿದ್ದರೆ ಅವರಿಗೆ ಫಸ್ಟ್ ಬೆಂಚ್ ಸಿಗುತ್ತಿತ್ತು. ಡಿಸಿಎಂ ಆಗಿದ್ದವರು ಈಗ ಎಲ್ಲಿದ್ದಾರೆ? ನಾನು ಇಲ್ಲಿ ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ, ಆರಾಮಾಗಿ ಇದ್ದೇನೆ ಎಂದರು.

ನಾನು ಬಿಜೆಪಿ ಶಾಸಕ. ಕಾಂಗ್ರೆಸ್ ಅವಧಿಯಲ್ಲಿ ಎರಡು ಬಾರಿ ಶಾಸಕನಾಗಿದ್ದೆ, ಆಗ ಅನುದಾನ ಕೊಟ್ಟಿದ್ದರು ಅಂತಾ ಮುಖ್ಯಮಂತ್ರಿ ಬಗ್ಗೆ ಎರಡು ಒಳ್ಳೆಯ ಮಾತಾಡಿದ್ದೇನೆ. ಕಳೆದ ಮೂರು ತಿಂಗಳಿನಿಂದ ನನ್ನ ಕ್ಷೇತ್ರದಲ್ಲಿ ಅನುದಾನ ಇಲ್ಲದೇ ಕೆಲಸ ಮಾಡಲು ಆಗಿಲ್ಲ. ರಾಜ್ಯಮಟ್ಟ, ಜಿಲ್ಲಾ ಮಟ್ಟದಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸ್ಥಳೀಯವಾಗಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಅಂತಾ ಬೆಂಬಲಿಗರ ಜೊತೆ ಮಾತನಾಡಿಲ್ಲ. ಡಿ.ಕೆ. ಶಿವಕುಮಾರ್ ಜೊತೆ ರಾಜಕೀಯ ಮಾತುಕತೆ ಮಾಡಿಲ್ಲ. ನನ್ನ ವಿರುದ್ಧ ಕೆಲಸ ಮಾಡಿದವರು ಇದೆಲ್ಲಾ ಕ್ರಿಯೇಟ್ ಮಾಡಿದ್ದಾರೆ. ನನಗೆ ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ ಅಂತಾ ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ‌, ಸಿ.ಟಿ. ರವಿಗೆ ಹೇಳಿದ್ದೇನೆ  ಎಂದು ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: MLA -ST Somashekhar – Minister -Dr. G. Parameshwar-statement