ಶಾಸಕ ಶ್ರೀಮಂತ್ ಪಾಟೀಲ್ ರನ್ನ ಅಪಹರಿಸಿ ಮುಂಬೈ ಆಸ್ಪತ್ರೆಗೆ ದಾಖಲಿಸಿದ್ದಾರೆ- ವಿಧಾನಸಭೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಗಂಭೀರ ಆರೋಪ..

ಬೆಂಗಳೂರು,ಜು,18,2019(www.justkannada.in): ಶಾಸಕರನ್ನ ಅಪಹರಿಸಿ ಹೊತ್ತೊಯ್ದಿದ್ದಾರೆ.  ಶಾಸಕರನ್ನ ಹೊತ್ತೊಯ್ದಿರುವ ದಾಖಲೆಗಳನ್ನ ನೀಡುವೆ ಎಂದು ಬಿಜೆಪಿ ವಿರುದ್ದ ಸಚಿವ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ಬೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಮತ್ತೆ ಆರಂಭವಾಗಿದ್ದು, ಈ ವೇಳೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್,  ಶಾಸಕರನ್ನ ಅಪಹರಿಸಿ ಹೊತ್ತೊಯ್ದಿದ್ದಾರೆ.  ಶಾಸಕರನ್ನ ಹೊತ್ತೊಯ್ದಿರುವ ದಾಖಲೆಗಳನ್ನ ನೀಡುವೆ. ಶ್ರೀಮಂತ ಪಾಟೀಲರನ್ನ ಬಲವಂತವಾಗಿ ಕರೆದೊಯ್ದಿದ್ದಾರೆ. ಇಂಡಿಗೋ ವಿಮಾನದಲ್ಲಿ ಕರೆದೊಯ್ದು ಮುಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ ಎಂದು ಆರೋಪಿಸಿದರು.

ಮಲಗಿರೋ ತರ ಫೋಟೊ ಹೊಡೆದು  ಫೋಟೊ ರಿಲೀಸ್ ಮಾಡಿದ್ದಾರೆ ಎಂದು ಸಚಿವ ಡಿ.ಕೆ ಶಿವಕುಮಾರ್  ಫೋಟೊ ತೋರಿಸಿದರು.

Key words: MLA-Shrimant Patil- abducted -admitted – Mumbai hospital-DK shivakumar