ತಮಾಷೆ ಮಾಡುತ್ತಲೇ ಬಿಜೆಪಿ ಶಾಸಕ ಶ್ರೀರಾಮುಲು ‘ಓಪನ್ ಆಫರ್’ ಕೊಟ್ರೇ ಸಚಿವ ಡಿ.ಕೆ ಶಿವಕುಮಾರ್…

ಬೆಂಗಳೂರು,ಜು,18,2019(www.justkannada.in):  ರಾಜಕಾರಣದಲ್ಲಿ ಯಾರು ಶತ್ರು ಅಲ್ಲ ಮಿತ್ರರೂ ಅಲ್ಲ ಎಂಬುದಕ್ಕೆ  ಇಂದು ಸದನದಲ್ಲಿ ನಡೆದ ಸಚಿವ ಡಿ.ಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಶ್ರೀರಾಮುಲು ನಡುವಿನ ಸಂಭಾಷಣೆ ಸಾಕ್ಷಿಯಾಗಿದೆ.

ಹೌದು, ಇಂದು ಸದನ ಕಲಾಪವನ್ನ ಸ್ಪೀಕರ್ ರಮೇಶ್ ಕುಮಾರ್ 3 ಗಂಟೆಗೆ ಮುಂದೂಡಿದ ನಂತರ ಅಲ್ಲೆ ಕುಳಿತಿದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ,ಕೆ ಶಿವಕುಮಾರ್ ತಮಾಷೆ ಮಾಡುತ್ತಲೇ ಡಿಸಿಎಂ ಆಫರ್ ನೀಡಿದ್ದಾರೆ. ಬಿಜೆಪಿಯಲ್ಲಿ ನಿನ್ನನ್ನ ಡಿಸಿಎಂ ಮಾಡೋದಿಲ್ಲ ಬೇರೆಯವರನ್ನ ಡಿಸಿಎಂ ಮಾಡ್ತಾರೆ. ರಮೇಶ್ ಜಾರಕಿಹೊಳಿಯನ್ನ ಡಿಸಿಎಂ ಮಾಡ್ತಾರೆ ಎಂದು ಶ್ರೀರಾಮುಲುಗೆ  ಸಚಿವ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಪರೋಕ್ಷವಾಗಿ  ಡಿಸಿಎಂ ಸ್ಥಾನದ ಆಫರ್ ನೀಡಿದರು.

ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ಗೆ ಸಾಥ್ ನೀಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅಲ್ಲಿ ಕೂತು ಏನ್ ಯೋಚನೆ ಮಾಡುತ್ತಿದ್ದೀಯಾ. ನಮ್ಮ ಬಳಿ ಬಾ..? ಎಂದು ಶ್ರೀರಾಮುಲು ಅವರನ್ನ ಕರೆದರು. ಇದಕ್ಕೆ ಶ್ರೀರಾಮುಲು ಅವರು ಏನನ್ನು ಪ್ರತಿಕ್ರಿಯೆ ನೀಡದೇ ಬರೀ ನಕ್ಕು ಸುಮ್ಮನಾದರು.

Key words: BJP MLA -Shriramulu -Open Offer-Minister DK Sivakumar-session