ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ: ಸಾಮೂಹಿಕ ರಾಜೀನಾಮೆಗೆ ಮುಂದಾದ ಬೆಂಬಲಿಗರ ಮನವೊಲಿಕೆಗೆ ಶಾಸಕ ಎಸ್.ಎ  ರಾಮದಾಸ್ ಯತ್ನ

ಮೈಸೂರು,ಆ,21,2019(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಮಿಸ್ ಆದ ಹಿನ್ನೆಲೆ  ಮೈಸೂರಿನಲ್ಲಿ ಶಾಸಕ ಎಸ್.ಎ ರಾಮದಾಸ್ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಕಾರ್ಯಕರ್ತರು ಹಾಗೂ  ಬೆಂಬಲಿಗರ ಮನವೊಲಿಸಲು  ಎಸ್ ಎ ರಾಮದಾಸ್ ಯತ್ನಿಸಿದ್ದಾರೆ. ಪಕ್ಷದ ನಿರ್ಣಯಕ್ಕೆ ಬದ್ಧವಾಗಿರುವಂತೆ ಎಸ್.ಎ ರಾಮದಾಸ್  ಬೆಂಬಲಿಗರಿಗೆ ಕಿವಿ ಮಾತು ಹೇಳಿದ್ದಾರೆ. ಯಾರು ಕೂಡ ದುಡುಕಿ ಯಾವ ನಿರ್ಧಾರ ಕೈಗೊಳ್ಳಬೇಡಿ ಎಂದು  ಕಾರ್ಯಕರ್ತರು ಹಾಗು ಪಕ್ಷದ ಮುಖಂಡರಿಗೆ ರಾಮದಾಸ್ ಸೂಚನೆ ನೀಡಿದ್ದಾರೆ.

ಮುಖಂಡರ ಭಿನ್ನಮತ ಶಮನಕ್ಕೆ ರಾಮದಾಸ್ ಸಭೆ ಕರೆದಿದ್ದು  ಮೈಸೂರಿನ ಶಂಕರಮಠದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸಮಾಧಾನ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟುಗೂಡಿ  ದೇಶಕ್ಕಾಗಿ  ಪಕ್ಷ ಸಂಘಟನೆ ಮಾಡೋಣ. ಈ ಬಾರಿಯ ದಸರಾ  ಯಶಸ್ವಿಯಾಗಿ ಮಾಡೋಣ, ಸಚಿವ ಸ್ಥಾನ ಮಿಸ್  ಆಗಿದ್ದಕ್ಕೆ ನನಗೇನು ಬೇಸರ ಇಲ್ಲಾ, ನನ್ನನ್ನ ಸಚಿವರಾಗಿ  ಪ್ರಮಾಣವಚನ ಸ್ವೀಕರಿಸಲು  ಸಿಎಂ ರಿಂದ  ಕರೆ ಬಂದಿದ್ದು  ನಿಜ ಆದರೆ ಕೊನೆ ಗಳಿಗೆಯಲ್ಲಿ  ಕೈ ತಪ್ಪಿದೆ, ನನಗೆ ಸಚಿವ ಸ್ಥಾನವೇ ಮುಖ್ಯವಲ್ಲ,  ಪಕ್ಷ ಮುಖ್ಯವೆಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.

Key words: MLA-SA Ramdas – persuade- supporters – mass resignation-mysore