Monday, September 28, 2026

BDA Apartments

ಶಾಸಕ ಎಸ್.ಎ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ… BDA JK_Adv BDA Adv
Home Crime ಶಾಸಕ ಎಸ್.ಎ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ….

ಶಾಸಕ ಎಸ್.ಎ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ….

ದಕ್ಷಿಣ ಕನ್ನಡ,ಆ,23,2019(www.justkannada.in):  ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಸದ್ಯ ಶಾಸಕ ಎಸ್.ಎ ರಾಮದಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಳಿ ಇಂದು ಮುಂಜಾನೆ  ಕಾರು ಅಪಘಾತ ಸಂಭವಿಸಿದೆ. ಶಾಸಕ ರಾಮದಾಸ್ ಹಾಗೂ  ಅವರ ಸಹೋದರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಅದೃಷ್ಟವಷತ್  ಸಹೋದರರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಳ್ಯ ಪಕ್ಕದಲ್ಲಿರುವ ಆಸ್ಪತ್ರೆಯಲ್ಲಿ ಶಾಸಕ ರಾಮದಾಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಸುಳ್ಯದ ಕೆವಿಸಿ  ಆಸ್ಪತ್ರೆಗೆ  ದಾಖಲು ಮಾಡಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Key words: MLA SA Ramdas – car –accident-dakshina kannada