Wednesday, August 19, 2026

BDA Apartments

Home Front Page ಖಾತೆ ಹಂಚಿಕೆ ಇಂದು ಫೈನಲ್ ಆಗುತ್ತೆ – ನೂತನ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ…

ಖಾತೆ ಹಂಚಿಕೆ ಇಂದು ಫೈನಲ್ ಆಗುತ್ತೆ – ನೂತನ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ…

ನವದೆಹಲಿ,ಆ,23,2019(www.justkannada.in): ಇಂದು ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಆಗಲಿದೆ ಎಂದು ನೂತನ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಇಂದೇ ಸಚಿವರ ಖಾತೆ ಹಂಚಿಕೆ ಫೈನಲ್ ಆಗಲಿದ್ದು ಖಾತೆ ಹಂಚಿಕೆ ಪಟ್ಟಿ ಇಂದೇ ಬಿಡುಗಡೆಯಾಗಬಹುದು. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದರು.

ಶಾಸಕ ಉಮೇಶ್ ಕತ್ತಿ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, ಉಮೇಶ್ ಕತ್ತಿ ಅಸಮಾಧಾನವಿದೆ ಅಂತಾ ಮಾತ್ರ ಹೇಳಿದ್ದಾರೆ. ಅವರು ನೊಂದಿರಬಹುದು. ಅದನ್ನ ನಮ್ಮ ಪಕ್ಷದ ನಾಯಕರು ಸರಿಪಡಿಸುತ್ತಾರೆ.ಯಾವುದೇ ಮನಸ್ತಾಪವಿಲ್ಲ. ಯಾವುದೇ ರಾಜಕೀಯ ಬೆಳವಣಿಗೆ ಇಲ್ಲ ಎಂದರು.

ಉಮೇಶ್ ಕತ್ತಿ ಸಾಕಷ್ಟು ಬಾರಿ ಈ ಸ್ಥಾನ ಅನುಭವಿಸಿದ್ದಾರೆ. ನಮ್ಮ ನಾಯಕರು ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

Key words: final –today-New Minister- Ashwath Narayan- clarified.