Sunday, August 23, 2026

BDA Apartments

Home Front Page ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ಬೇಸರ

ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ಬೇಸರ

ಮೈಸೂರು, ಮಾರ್ಚ್ 26, 2022 (www.justkannada.in): ಮಠಾಧಿಪತಿಗಳು ಹಿಂದು ಹೆಣ್ಣುಮಕ್ಕಳ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ‌ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕೀಯಕೊಸ್ಕರ ಧರ್ಮದ ವಿಚಾರವನ್ನ ಬೀದಿಗೆ ತರಬಾರದು. ಸಿದ್ದರಾಮಯ್ಯ ಒಬ್ಬ ರಾಜಕೀಯ ಮುತ್ಸದ್ಧಿ, ಮುಖ್ಯಮಂತ್ರಿ ಆಗಿದ್ದವರು. ರಾಜ್ಯದ ಎಲ್ಲಾ ಜನರು ಅವರಿಗೆ ಒಂದೇ ಆಗಿರಬೇಕು. ಓಟಿಗೊಸ್ಕರವಾಗಿ, ಯಾರನ್ನೊ ಓಲೈಕೆ ಮಾಡಲು ಇನ್ನೊಬ್ಬರನ್ನ ಅಪಹಾಸ್ಯ ಮಾಡುವುದು ಒಳ್ಳೆಯದಲ್ಲ ಎಂದು ರಾಮದಾಸ್ ಹೇಳಿದ್ದಾರೆ.

ನಮ್ಮ ಸಂಪ್ರದಾಯದಂತೆ ಸೆರಗು ಹಾಕಿಕೊಳ್ಳುತ್ತಾರೆ. ಯತಿಗಳು, ಮಠಾಧಿಪತಿಗಳು ವಸ್ತ್ರವನ್ನು ತಲೆಮೇಲೆ ಹಾಕಿಕೊಳ್ಳುತ್ತಾರೆ. ಯಾವುದೋ ವ್ಯವಸ್ಥೆಗೆ ವಿವಾದ ಮಾಡುವುದನ್ನ ಸಿದ್ದರಾಮಯ್ಯರಿಂದ ನಾನು ನಿರೀಕ್ಷೆ ಮಾಡಿರಲಿಲ್ಲ. ಯಾರು ಇದರಿಂದ ದೊಡ್ಡವರಾಗುವುದಿಲ್ಲ. ತಪ್ಪಾಗಿದ್ರೆ ತಪ್ಪಾಗಿದೆ ಎಂದು ಕ್ಷಮೆ ಕೇಳುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.

ಅವರು ಏನು ಹೇಳಿದ್ದಾರೆ ಎಂಬುದು ಮಾಧ್ಯಮದ ಮುಂದೆ ಇದೆ. ಎಂಟು ಹೈ ಕೋರ್ಟ್ ಇದರ ಬಗ್ಗೆ ತೀರ್ಪು ಕೊಟ್ಟಿವೆ. ನ್ಯಾಯಲದ ವಿರುದ್ಧ ಯಾಕೆ ಮಾತನಾಡಬೇಕು. ಏನು 2023 ರ ಚುನಾವಣೆಗೊಸ್ಕರಾನಾ.? ಯಾರೊ ಬಡ್ಡಿಂಗ್ ಪೊಲಿಟೀಶಿಯನ್ ಮತಾನಾಡಿದ್ರೆ ಪರ್ವಾಗಿಲ್ಲ. ಇಂತಹ ಹಿರಿಯರಿಂದ ನಿರೀಕ್ಷೆ ಮಾಡಿರಲಿಲ್ಲ. ಯಾರಿಗೆ ನೋವಾಗಿದೆಯೋ ಅವರು ಕ್ಷಮೆ ಕೇಳಬೇಕು ಎಂದು ನಿರೀಕ್ಷಿಸುವುದು ಸಹಜ. ಕ್ಷಮೆ ಕೇಳಿದರೆ ಒಳ್ಳೆಯದು ಎಂದು ಶಾಸಕ ರಾಮದಾಸ್ ಹೇಳಿದ್ದಾರೆ.