Monday, September 28, 2026

BDA Apartments

ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ ಎಸೆತ ಕೇಸ್: ಮತ್ತೆ ಐವರು ಆರೋಪಿಗಳ ಬಂಧನ BDA JK...
Home Crime ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ ಎಸೆತ ಕೇಸ್:  ಮತ್ತೆ ಐವರು ಆರೋಪಿಗಳ ಬಂಧನ

ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ ಎಸೆತ ಕೇಸ್:  ಮತ್ತೆ ಐವರು ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ,ಜೂನ್,29,2026 (www.justkannada.in): ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಬಳಾಪುರ ಠಾಣಾ ಪೊಲೀಸರು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಐವರನ್ನು ಬಂದಿಸಿದ್ದಾರೆ. ಹನುಮಂತಪುರದ ನಿವಾಸಿಗಳಾದ ರಾಜೇಶ್, ಚಂದನ್, ರಾಮಗಾನಪರ್ತಿಯ ಶ್ರೀನಿವಾಸ್, ಶಾಂತಿನಗರದ ಮುನೇಗೌಡ ಅಂದಾರ್ಲಹಳ್ಳಿ ನವೀನ್  ಬಂಧಿತ ಆರೋಪಿಗಳಾಗಿದ್ದು ಐವರನ್ನು 14 ದಿನಗಳ ಕಾಲ ನ್ಯಾಯಾಮಗ ಬಂಧನಕ್ಕೆ ಒಪ್ಪಿಸಲಾಗಿದೆ.ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ ಎಸೆತ ಕೇಸ್ arrest

ನಗರದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ನಡೆದಿತ್ತು.  ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ನತ್ತ ಚಪ್ಪಲಿ ಎಸೆಯಲಾಗಿತ್ತು.ಮತ್ತೆ ಐವರು ಆರೋಪಿಗಳ ಬಂಧನ BDA JK_Adv BDA Adv

Key words: MLA. Pradeep Easwar, Slipper, throwing, case, Five , arrested