ಸಿಪಿ ಯೋಗೇಶ್ವರ್ ಪರ ಬ್ಯಾಟ್ ಬೀಸಿದ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿ….

ನವದೆಹಲಿ,ಜನವರಿ,15,2021(www.justkannada.in):  ಸಿಪಿ ಯೋಗೇಶ್ವರ್ ಮನೆ ಮಾರಿದ್ದಾರೆ. ಸಾಲ ಮಾಡಿದ್ದಾರೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿಗೆ ಯೋಗೇಶ್ವರ್ ಮೇಲೆ ಪ್ರೀತಿಯಿದ್ದರೆ ಮಾತನಾಡಲಿ. ಅದು ಬಿಟ್ಟು ಸಚಿವ ಸ್ಥಾನ ನೀಡಲು ಅವರು ಮುಖ್ಯಮಂತ್ರಿಯಾ, ವಕ್ತಾರ ಎಂದು  ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು.jk-logo-justkannada-mysore

 ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದು ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡದಿ ಶಾಸಕ ಎಂ.ಪಿ ರೇಣುಕಾಚಾರ್ಯ, ಕ್ಷೇತ್ರದ ವಿಚಾರಕ್ಕಾಗಿ ದೆಹಲಿಗೆ ಬಂದಿದ್ದೆ. ನಂತರ ಅರುಣ್ ಸಿಂಗ್ ಅವರಿಗೆ ಕರೆ ಮಾಡಿ ಸಮಯ ಕೇಳಿದ್ದೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಗೆ ಭೇಟಿಯಾಗಿದ್ದೆ ಎಂದರು.MLA-MP Renukacharya speech-aginst- CP Yogeshwar-ramesh jarkiholi

ಸಿಪಿ ಯೋಗೇಶ್ವರ್ ಬಿಡದಿಯಲ್ಲಿ 50 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ನಾಲ್ಕು ಐಷಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಬಂಗಲೆಯನ್ನ ಖರೀದಿಸಿದ್ದಾರೆ. ಹೀಗಿರುವಾಗ ಅವರು ಏಕೆ 9 ಕೋಟಿ ಸಾಲ ಮಾಡಿದರು. ರಮೇಶ್ ಜಾರಕಿಹೊಳಿ ಏನು ಮುಖ್ಯಮಂತ್ರಿಯಾ, ವಕ್ತಾರರಾ ಎಂದು ವಾಗ್ದಾಳಿ ನಡೆಸಿದರು.

Key words: MLA-MP Renukacharya speech-aginst- CP Yogeshwar-ramesh jarkiholi