ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಶಾಸಕ ಮಹೇಶ್ ಕುಮುಟಳ್ಳಿ ಆಗ್ರಹ.

ಬೆಳಗಾವಿ,ಅಕ್ಟೋಬರ್,20,2021(www.justkannada.in)   ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿ ಶಾಸಕ ಮಹೇಶ್ ಕುಮುಟಳ್ಳಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಶಾಸಕ ಮಹೇಶ್ ಕುಮುಟಳ್ಳಿ, ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಟ್ಟರೆ ಕ್ಷೇತ್ರದಲ್ಲಿ ಕೆಲಸಗಳಾಗುತ್ತದೆ. ಹೀಗಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ.

ನನಗೆ ಸಚಿವ ಸ್ಥಾನ ನೀಡಿ ಎಂದು ನಾನು ಕೇಳುತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ. ರಮೇಶ್ ಜಾರಕಿಹೊಳಿ ವರ್ಕರ್ ಇದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಮೊದಲು ಇದ್ದಂತವರು. ಪಕ್ಷವನ್ನು ಕೂಡ ಕಟ್ಟುತ್ತಿದ್ದಾರೆ. ಹಲವಾರು ರಾಜಕೀಯ ವಿದ್ಯಮಾನಗಳಲ್ಲಿ ಇದೆಲ್ಲ ನಡೆದಂತ ಘಟನೆ. ಮೊದಲಿನಿಂದಲೂ ನಾನು ಡಿಫೆಂಡ್ ಮಾಡಿಕೊಂಡು ಬಂದಿದ್ದೇನೆ, ಇವತ್ತು ಮಾಡಿಕೊಳ್ಳುತ್ತೇನೆ. ರಮೇಶ್ ಜಾರಕಿಹೊಳಿಗೆ ಉನ್ನತ ಸ್ಥಾನ ಕೊಟ್ಟರೆ ನಮ್ಮ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡುತ್ತಾರೆ. ಅವರು ಮಂತ್ರಿ ಆದರೆ ನಮ್ಮ ಕ್ಷೇತ್ರದ ಕೆಲಸ ಆಗುತ್ತವೆ. ಹೀಗಾಗಿ ವರಿಷ್ಠರಲ್ಲಿ ವಿನಂತಿ ಸಹ ಮಾಡಿದ್ದೀವಿ ಎಂದು ಶಾಸಕ ಮಹೇಶ್ ಕುಮುಟಳ್ಳಿ ಆಗ್ರಹಿಸಿದ್ದಾರೆ.

ಪಕ್ಷದ ರಾಜ್ಯ, ರಾಷ್ಟ್ರ ನಾಯಕರು ಪಕ್ಷ ಗಟ್ಟಿ ಮಾಡಲು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾನು ಸಚಿವ ಸ್ಥಾನ ನೀಡಿ ಅಂತಾ ಕೇಳಿಲ್ಲ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದು ಶಾಸಕ ಮಹೇಶ್ ಕುಮುಟಳ್ಳಿ ತಿಳಿಸಿದ್ದಾರೆ.

Key words: MLA- Mahesh Kumutalli –demands- Ramesh Jarakiholi- minister

ENGLISH SUMMARY…

MLA Mahesh Kumatahalli urges BJP high command to give Ramesh Jarkiholi a place in the cabinet
Belagavi, October 20, 2021 (www.justkannada.in): BJP MLA Mahesh Kumatahalli has urged Chief Minister Basavaraj Bommai and the BJP high command to give former Minister Ramesh Jarkiholi a place in the cabinet.
Speaking to the press persons today, he expressed his view that if Ramesh Jarkiholi is given a post in the cabinet, all works would go on smoothly in the constituency and hence demanded the BJP leaders to fulfill his demand.
“I am not asking you to give me a place in the cabinet. I am ready to carry out any responsibility. But Ramesh Jarkiholi is a good worker. Earlier, he was in respectable positions. He has also made efforts to build the party. But he had to face a bad time. I have been defending him right from the beginning and am doing so now also. If he is given a higher post, he will provide justice in the developmental works in our constituency. If he becomes a Minister, our works will move on smoothly. Hence, I request the BJP leaders to consider my request,” he added.
Keywords: BJP MLA Mahesh Kumatahalli/ Ramesh Jarkiholi/ place in cabinet