ಪ್ರಿ ಪ್ಲಾನ್ ಮಾಡಿಯೇ ಗಲಾಟೆ: ತಪ್ಪಿತಸ್ಥರ ವಿರುದ್ದ ಕ್ರಮ ಆಗಲಿ- ಶಾಸಕ ಜನಾರ್ದನರೆಡ್ಡಿ

ಬಳ್ಳಾರಿ,ಜನವರಿ,2,2026 (www.justkannada.in): ನಿನ್ನೆ ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದ ಆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಶಾಸಕ ಜನಾರ್ಧನ ರೆಡ್ಡಿ, ಪ್ರಿ ಪ್ಲಾನ್   ಮಾಡಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ನಿನ್ನೆ ಪ್ರಿ ಪ್ಲಾನ್ ಮಾಡಿಯೇ ಗಲಾಟೆ ಮಾಡಿದ್ದಾರೆ.  ನಿನ್ನೆಯಲ್ಲಿ ಗಲಾಟೆಯಲ್ಲಿ ಓರ್ವ ಹತ್ಯೆಯಾಗಿದೆ.  ಘಟನೆ ಬಗ್ಗೆ ಹಾಲಿ ನ್ಯಾಯಾಧೀಶರ ತನಿಖೆಯಾಗಲಿ.  ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಭರತ್ ರೆಡ್ಡಿ ತಂದೆ ಕ್ರಿಮಿನಲ್ ಆ್ಯಕ್ಟಿವಿಟಿಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆರಂಭವಾಗಿತ್ತು ಇಲ್ಲಿ ಬ್ಯಾನರ್ ಕಟ್ಟಬೇಡಿ ಅಂತಾ ಹೇಳಿದ್ದೆ. ನನ್ನ ಜೊತೆ ಶ್ರೀರಾಮುಲು ಕೂಡ ಬಂದಿದ್ದರು . ಶ್ರೀರಾಮಲು ಬರುತ್ತಿದ್ದಂತೆ ಫೈರಿಂಗ್ ಮಾಡಿದ್ರು. ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ಫೈರಿಂಗ್ ಮಾಡಿದರು ಎಂದು ಜನಾರ್ಧನ ರೆಡ್ಡಿ ಹೇಳಿದರು.

Key words: pre-plan, riots, MLA, Janardhana Reddy