ಕೇವಲ ಬಾಯಿ ಮಾತಿಗೆ ಹಿಂದುತ್ವ ಅಂದ್ರೆ ಸಾಲದು: ನಾಲ್ಕು ವರ್ಷದಲ್ಲಿ ಏನು ಮಾಡಿದ್ರಿ..? ಬಿಜೆಪಿ ವಿರುದ್ದ ಗುಡುಗಿದ ಶಾಸಕ ಜನಾರ್ದನ ರೆಡ್ಡಿ.

ಕೊಪ್ಪಳ,ಜುಲೈ,27,2023(www.justkannada.in):  ಬಿಜೆಪಿಯವರು ಎಲ್ಲಾ ವಿಚಾರದಲ್ಲೂ ರಾಜಕಾರಣ ಮಾಡುತ್ತಾರೆ.   ಕೇವಲ ಬಾಯಿ ಮಾತಿಗೆ ಹಿಂದುತ್ವ ಹಿಂದುತ್ವ ಅಂದರೇ ಸಾಲದು. ಕಳೆದ ನಾಲ್ಕು ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ಬಿಜೆಪಿ ವಿರುದ್ದ ಕೆಆರ್ ಪಿಪಿ ಶಾಸಕ ಜನಾರ್ದನ ರೆಡ್ಡಿ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಬಿಜೆಪಿಯವರಿಗೆ ಅಂಜನಾದ್ರಿ ಬೆಟ್ಟ ಅಭಿವೃದ್ದಿ ಮಾಡಲಾಗಲಿಲ್ಲ ಅಂಜನಾದ್ರಿ ಹೆಸರಿನಲ್ಲಿ ರಾಜಕಾರಣ ಮಾಡಿದರು. ಈಗ ನಾನು  ಸಿಎಂ ಭೇಟಿಯಾಗಿ ಅಂಜನಾದ್ರಿ ಅಭಿವೃದ್ದಿ ಮಾಡಿ ಎಂದು ಮನವಿ ಮಾಡಿದ್ದೇನೆ. ಅಭಿವೃದ್ದಿ ಮಾಡಲು ನಿಮಗೆ ಅವಕಾಶವಿದೆ ಅಂತಾ ಹೇಳಿದ್ದೇನೆ ಎಂದರು.

ಈಗಾಗಲೇ 120 ಕೋಟಿ ಅನುದಾನ ಮೀಸಲಿಡಲಾಗಿದೆ. ಅಯೊಧ್ಯೆ, ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ದಿಯಾಗಬೇಕು. ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಅಭಿವೃದ್ಧಿ ಮಾಡಲಾಗುತ್ತದೆ . ಮೊದಿಯವರ ಬಳಿಗೆ ಹೋಗಿ ಹಣ ತರುತ್ತೇನೆ ಎಂದು ಶಾಸಕ ಜನಾರ್ಧನ ರೆಡ್ಡಿ ತಿಳಿಸಿದರು.

Key words:  MLA- Janardana Reddy –outrage-against- BJP