Tuesday, August 11, 2026

BDA Apartments

Home Front Page 10 ನೋಟಿಸ್ ಕೊಟ್ರೋ ಒಂದೇ ಉತ್ತರ: ಡಿಕೆಶಿ ಒಂದು ಬಾರಿ ಸಿಎಂ ಆಗಬೇಕು –ಶಾಸಕ ಇಕ್ಬಾಲ್...

10 ನೋಟಿಸ್ ಕೊಟ್ರೋ ಒಂದೇ ಉತ್ತರ: ಡಿಕೆಶಿ ಒಂದು ಬಾರಿ ಸಿಎಂ ಆಗಬೇಕು –ಶಾಸಕ ಇಕ್ಬಾಲ್ ಹುಸೇನ್

ಬೆಂಗಳೂರು,ಫೆಬ್ರವರಿ,9,2026 (www.justkannada.in): ನನಗೆ 10 ಬಾರಿ ನೋಟಿಸ್ ಕೊಟ್ಟರೂ ನನ್ನದು ಒಂದೇ ಉತ್ತರ. ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಬೇಕು ಅನ್ನೋದು ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೆನ್ ತಿಳಿಸಿದರು.

ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಹೇಳಿಕೆ ನೀಡಿದ್ದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡದ ವಿಚಾರ ಕುರಿತು ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ಯತಿಂದ್ರಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಕೇಳಲು ಆಗಲ್ಲ. ನಾನು ಶಾಸಕನೇ ಯತೀಂದ್ರ ಸಹ ಎಂಎಲ್ ಸಿ. ಈ ಹಿಂದೆ ನಾನು ಮಾತನಾಡಿದಾಗ ನೋಟಿಸ್ ಕೊಟ್ಟಿದ್ದರು. ಯಾರು ನೋಟಿಸ್ ಕೊಡಬೇಕೋ ಅವರು ನೋಡಬೇಕು. 10 ನೋಟಿಸ್ ನೀಡಿದರೂ ನಾನು ಒಂದೇ ಉತ್ತರ ಕೊಡೋದು. ಡಿಕೆ  ಶಿವಕುಮಾರ್ ಒಂದು ಬಾರಿ ಸಿಎಂ ಆಗಬೇಕು ಅನ್ನೋದಷ್ಟೆ ಉದ್ದೇಶ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಅವಕಾಶ ಮಾಡಿಕೊಡಬೇಕು ಎಂದರು.

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ತಯಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್ ರಾಮನಗರ ಯಾರಪ್ಪನ ಸ್ವತ್ತು ಅಲ್ಲ. ಯಾರು ಬೇಕಾದರೂ ರಾಮನಗರದಲ್ಲಿ ಸ್ಪರ್ಧೆ ಮಾಡಬಹುದು.  ಸಾಕಷ್ಟು ನಾಯಕರು ರಾಮನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ರಾಮನಗರ ತಾಲ್ಲೂಕಿನ ಮಗ ಅಲ್ಲಿಯೇ ಹುಟ್ಟಿ ಬೆಳೆದವರು ಚುನಾವಣೆಗೆ ನಿಲ್ಲಬೇಡಿ ಅಂತಾ ಹೆಚ್ ಡಿಕೆಗೆ ಹೇಳಲು ಆಗುತ್ತಾ?  ಶಿಸ್ತು ಇಲ್ಲದೆ ಇರುವವರು ಎಲ್ಲಿ ಬೇಕಾದರೂ ಸ್ಪರ್ಧಿಸುತ್ತಾರೆ ರಾಮನಗರ,  ಚನ್ನಪ್ಪಟ್ಟಣ ಚಿಕ್ಕಬಳ್ಳಾಪುರದಲ್ಲೂ ಸ್ಪರ್ಧಿಸಿದ್ದಾರೆ. ಅವರ ರಾಜಕೀಯ ಹಿನ್ನೆಲೆಗೂ ನನ್ನ ರಾಜಕೀಯ ಹಿನ್ನೆಲೆಗೂ ವ್ಯತ್ಯಾಸವಿದೆ ಎಂದರು.

Key words: notices, one answer, DK Shivakumar,  become, CM, MLA Iqbal Hussain