ಐದು ವರ್ಷ ಅಲ್ಲ ಮುಂದಿನ 15 ವರ್ಷ ಸಿದ್ದರಾಮಯ್ಯ ಸಿಎಂ ಆಗಿರಬೇಕು- ಶಾಸಕ ಹರೀಶ್ ಗೌಡ

ಮೈಸೂರು,ಫೆಬ್ರವರಿ,14,2026 (www.justkannada.in): ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷವೂ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ ನವರು 5 ವರ್ಷವಲ್ಲ ಮುಂದಿನ 15 ವರ್ಷದವರೆಗೂ ಅವರೇ ಸಿಎಂ ಆಗಿರಬೇಕು ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹರೀಶ್ ಗೌಡ, ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ನಾವು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರ ಪರವು ಇದ್ದೇವೆ. ಪ್ರವಾಸ ತೆರಳುವ ಬಗ್ಗೆ ನನಗೆ ಆಹ್ವಾನ ಬಂದಿಲ್ಲ. ಆದರೆ ಪ್ರವಾಸ ಹೋಗುವುದು ಸರ್ವೆ ಸಾಮಾನ್ಯವಾದ ವಿಷಯ. 6 ತಿಂಗಳ ಹಿಂದೆ ನಾವು ಸಹ ಕೆಲ ಶಾಸಕರ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದೆ, ಅದರಲ್ಲೇನು ತಪ್ಪಿಲ್ಲ ಎಂದರು.

ಸಿಎಂ ಬದಲಾವಣೆ ವಿಚಾರದಲ್ಲಿ ಹೈ ಕಮಾಂಡ್ ಹೇಳಿದ ಹಾಗೆ ಎಂದು ಸಿಎಂ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು ಇಲ್ಲ. ನಮ್ಮ ಹೈ ಕಮಾಂಡ್ ನಲ್ಲಿ ಹಿರಿಯರಿದ್ದಾರೆ ಅವರು ತೀರ್ಮಾನ ಮಾಡಲಿದ್ದಾರೆ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಬೇಕು ಎನ್ನುವ ಆಸೆ ನನಗಿದೆ. ಹಾಗೆಯೇ ಡಿಕೆಶಿಯವರು ಸಹ ಸಿಎಂ ಆಗುತ್ತಾರೆ. ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.

Key words: Siddaramaiah, CM, next 15 years, MLA, Harish Gowda