ಸಹಕಾರಿ ಕ್ಷೇತ್ರದ ಮೀಸಲಾತಿಗೆ ವಿರೋಧ ಖಂಡನೀಯ: ಬಹಿರಂಗ ಕ್ಷಮೆ ಕೇಳಲು ಶಾಸಕ ಜಿ.ಟಿ ದೇವೇಗೌಡರಿಗೆ ಆಗ್ರಹ.

ಮೈಸೂರು,ಫೆಬ್ರವರಿ,24,2024(www.justkannada.in): ಶಾಸಕಾಂಗ ಸಭೆಯಲ್ಲಿ ಸಹಕಾರಿ ಕ್ಷೇತ್ರದ ಮೀಸಲಾತಿ ವಿರೋಧಿಸಿರುವುದು ಖಂಡನೀಯ. ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರಿಗೆ  ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಆಗ್ರಹಿಸಿದೆ.

ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ವಿರುದ್ಧ ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡ ನಡೆ ಖಂಡಿಸಿ ಸಂವಿಧಾನ‌ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್. ಭಾಸ್ಕರ್,  ಕಾಂಗ್ರೆಸ್ ಮುಖಂಡ ವಕೀಲ ತಿಮ್ಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಶಾಸಕಾಂಗ ಸಭೆಯಲ್ಲಿ ಸಹಕಾರಿ ಕ್ಷೇತ್ರದ ಮೀಸಲಾತಿ ವಿರೋಧಿಸಿರುವುದು ಖಂಡನೀಯ. ಜಿ.ಟಿ ದೇವೇಗೌಡರು ಮತ್ತು ಪುತ್ರ ಹರೀಶ್ ಗೌಡ ಸ್ಪರ್ಧೆ ಮಾಡುವ ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲಿ ದಲಿತರ ವೋಟ್ ನಿಮಗೆ ಬೇಡವೇ.? ಪರಿಶಿಷ್ಟ ವರ್ಗದ ಮತಗಳು, ಹಿಂದುಳಿದ ಮತಗಳು  ನಿಮಗೆ ಬೇಡವಾ.? ಈ ಕೂಡಲೇ ತಾವು ಅಹಿಂದ ವರ್ಗಗಳ ಕ್ಷಮೆ ಕೋರಬೇಕು. ಇಲ್ಲ ಅಂದರೆ ನಿಮ್ಮ  ಕಛೇರಿ ಮುಂದೆ ಪ್ರತಿಭಟನೆ ಮೂಲಕ  ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಶಾಸಕಾಂಗ ಸಭೆಯಲ್ಲಿ ನೀವು ಏನು ವಿರೋಧ ಮಾಡಿದ್ರಿ ಅಲ್ಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲ ಅಂದರೆ ನನಗೆ ಅಹಿಂದ ಮತಗಳು ಬೇಡ ಅಂತ ಹೇಳಿ. ಸಹಕಾರಿ ಕ್ಷೇತ್ರದಲ್ಲಿ ತಮ್ಮ‌ಹಿಡಿತ ಕೈತಪ್ಪುತ್ತಿದೆ ಎಂಬ ಹತಾಶೆಯಿಂದ ಈ‌ ರೀತಿ ಜಿ.ಟಿ ದೇವೇಗೌಡರು ಹೇಳಿದ್ದಾರೆ. ಹಾಗಾಗಿ ಜಿಟಿಡಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ  ಕಾಂಗ್ರೆಸ್ ಮುಖಂಡ, ವಕೀಲ ತಿಮ್ಮಯ್ಯ, ಹಿಂದುಳಿದ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮ್, ನಾಯಕ ಹಿತರಕ್ಷಣಾ ಸಮಿತಿ ಮುಖಂಡ ದ್ಯಾಮಪ್ಪ ನಾಯಕ ಸೇರಿದಂತೆ ಇತರರು ಭಾಗಿಯಾಗಿದ್ದರು.

Key words: MLA GT Deve Gowda -Opposition – Cooperative -Sector -Reservation -Condemnable