Saturday, August 29, 2026

BDA Apartments

Home Front Page ಮಾನವೀಯತೆ ಕಾರಣಕ್ಕೆ ಸಿದ್ದರಾಮಯ್ಯ ಭೇಟಿ: ಅವರಿಗೆ ಒಳ್ಳೆಯದಾಗಲಿ ಎಂದ ಶಾಸಕ ಜಿಟಿ ದೇವೇಗೌಡ

ಮಾನವೀಯತೆ ಕಾರಣಕ್ಕೆ ಸಿದ್ದರಾಮಯ್ಯ ಭೇಟಿ: ಅವರಿಗೆ ಒಳ್ಳೆಯದಾಗಲಿ ಎಂದ ಶಾಸಕ ಜಿಟಿ ದೇವೇಗೌಡ

ಬೆಂಗಳೂರು,ಮೇ,27,2026 (www.justkannada.in):  ಸಿಎಂ ಸಿದ್ದರಾಮಯ್ಯ ನಿರ್ಧಾರದ ಬಗ್ಗೆ ನಾನೇನು ಈಗ ಮಾತನಾಡಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.

ಸಿಎಂ ರಾಜೀನಾಮೆ  ಸಾಧ್ಯತೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದರು. ಬಳಿಕ ಮಾಧ್ಯಗಳ ಜೊತೆ ಮಾತನಾಡಿದ ಅವರು,  ಸುದೀರ್ಘ ರಾಜಕಾರಣ  ಮಾಡಿದವರು. ಏನು ಮಾಡಬೇಕು ಎಂದು ಸಿದ್ದರಾಮಯ್ಯಗೆ ಗೊತ್ತಿದೆ. ಮಾನವೀಯತೆ ಕಾರಣಕ್ಕೆ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇನೆ. ಸಿದ್ದರಾಮಯ್ಯ ನಿರ್ಧಾರದ  ಬಗ್ಗೆ ನಾನೇನು ಈಗ ಮಾತನಾಡಲ್ಲ ಎಂದರು.

ಸಿದ್ದರಾಮಯ್ಯ ದೆಹಲಿಯಿಂದ ಬಂದ ಬಗ್ಗೆ ಮಾಹಿತಿ ಕೊಟ್ಟರು.  ರಾಜಕಾರಣ ಬೇರೆ ವೈಯಕ್ತಿಕವಾಗಿ ಭೇಟಿ ಮಾಡೋದೆ ಬೇರೆ.  ನಾವೇನು ಸಲಹೆ ಕೊಡೋದು ಇರಲ್ಲ.  ಅವರಿಗೆ ಒಳ್ಳೆಯದಾಗಲಿ ಎಂದು ಶಾಶಕ ಜಿಟಿ ದೇವೇಗೌಡ ತಿಳಿಸಿದರು.

Key words: Siddaramaiah, Meet, MLA, GT Deve Gowda