ನನಗೆ ಮಂತ್ರಿ ಸ್ಥಾನದ ಆಸಕ್ತಿ ಇಲ್ಲ: ಡಿಕೆಶಿ ಸಿಎಂ ಆಗಲಿ- ಶಾಸಕ ಸಿ.ಪಿ ಯೋಗೇಶ್ವರ್

ರಾಮನಗರ,ಜುಲೈ,8,2025 (www.justkannada.in):  ನನಗೆ ಸಚಿವ ಸ್ಥಾನ ಬೇಡ, ನನಗೆ ಮಂತ್ರಿ ಸ್ಥಾನದ ಆಸಕ್ತಿ ಇಲ್ಲ. ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು  ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಶಾಸಕ ಸಿಪಿ ಯೋಗೇಶ್ವರ್, ಅಧಿಕಾರದ ಒಡಂಬಡಿಕೆ ವಿಚಾರ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕನಾಗಿ ಆರು ತಿಂಗಳಾಗಿದೆ. ನನಗೆ ಮಂತ್ರಿ ಸ್ಥಾನ ಬೇಡ. ಮೊದಲು ಡಿ.ಕೆ. ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಸಿಗಲು ಬೆಂಬಲಿಸುತ್ತೇನೆ. ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂಬುದು ಜಿಲ್ಲೆಯ ಶಾಸಕರ ಬಯಕೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ಸಿಎಂ ಸಿದ್ಧರಾಮಯ್ಯ ರಾಷ್ಟ್ರರಾಜಕಾರಣಕ್ಕೆ ಹೋಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್, ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಸೀರಿಯಸ್ ಆಗಿ ಫಾಲೋ ಮಾಡುತ್ತಿಲ್ಲ. ಯಾರು ಏನು ಆಗುತಿದ್ದಾರೆ, ಏನು ಆಗುತ್ತಿದೆ ಎನ್ನುವ ಮಾಹಿತಿ ಇಲ್ಲ ಎಂದರು.vtu

Key words: ministerial, post, DK Shivakumar, CM, MLA, C.P Yogeshwar