ಬೆಂಗಳೂರು,ಮೇ,30,2026 (www.justkannada.in): ರಾಜ್ಯದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆಂಬುದು ಈಗಾಗಲೇ ಬಹಿರಂಗವಾಗಿದ್ದು ಸಿಎಲ್ ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಈ ನಡುವೆ ನೂತನ ಸಂಪುಟಕ್ಕೆ ಸೇರ್ಪಡೆಯಾಗಲು ಶಾಸಕರ ಲಾಬಿ ಹೆಚ್ಚಾಗಿದ್ದು ಶಾಸಕ ಬೇಳೂರು ಗೋಪಾಲಕೃಷ್ಣ ಸಹ ತಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ನಮಗೆ ಸಚಿವ ಸ್ಥಾನ ಕೊಡುವಂತೆ ಕೇಳಲು ಹಕ್ಕಿದೆ. ಕೇಳುತ್ತೇವೆ. ನಾನು ಹಿಂದುಳಿದ ವರ್ಗದಿಂದ ಬಂದಿರುವೆ ಅವಕಾಶ ಕೊಡಿ. ನಾನು ಭಿನ್ನಮತ, ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ ಎಂದು ಹೇಳಿದ್ದಾರೆ.
Key words: Aspirant, ministerial post, MLA, Belur Gopalkrishna







