Sunday, September 20, 2026

BDA Apartments

Home Front Page ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದ, ನಾನು ಗೆದ್ದಿದ್ದೇನೆ ಎಂದ ಶಾಸಕ ಯತ್ನಾಳ್.

ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದ, ನಾನು ಗೆದ್ದಿದ್ದೇನೆ ಎಂದ ಶಾಸಕ ಯತ್ನಾಳ್.

ವಿಜಯಪುರ,ಜನವರಿ,8,2024(www.justkannada.in): ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದವಾಗಿದ್ದು ನಾನು ಗೆದ್ದಿದ್ದೇನೆ. ಎ‍ಲ್ಲಾ ವಿಚಾರಗಳನ್ನ ವರಿಷ್ಠರ ಮುಂದೆ ಹೇಳಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದ ವಿಚಾರ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,   ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿ ಮಾಡಿದ್ದೇನೆ. 25 ನಿಮಿಷ ಚರ್ಚೆ ಮಾಡಿದ್ದೇನೆ.  ಏನು ಹೇಳಬೇಕಿತ್ತು ಅದನ್ನ ಹೇಳಿದ್ದೇನೆ  40 ಸಾವಿರ ಕೋಟಿ ಭ್ರಷ್ಟಾಚಾರದ ಬಗ್ಗೆ, ಅಡ್ಜೆಸ್ಟ್ ಮೆಂಟ್ ರಾಜಕಾರಣದ, ರಾಜ್ಯ ರಾಜಕಾರಣದ  ಬಗ್ಗೆ ತಿಳಿಸಿದ್ದೇನೆ. ಎಲ್ಲಾ ವಿಚಾರಗಳನ್ನು ವರಿಷ್ಟರ ಮುಂದೆ ಹೇಳಿದ್ದೇನೆ. ನನ್ನ ಭೇಟಿ ಫಲಪ್ರದವಾಗಿದೆ  ಎಂದರು.ಪಕ್ಷದ ವರಿಷ್ಠರ ನನ್ನ ಭೇಟಿ ಫಲಪ್ರದ basanagowda-patil-yatnal basanagowda patil yatnal

ನನ್ನ ಬಗ್ಗೆ ಹೈಕಮಾಂಡ್ ಗೆ ಗೌರವವಿದೆ  ಅಸಮಾಧಾನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಗೆ ಸೂಚನೆ ನೀಡಿದ್ದಾರೆ.  ನಾನು ಗೆದ್ದಿದ್ದೇನೆ  ಎಂದು ಯತ್ನಾಳ್ ತಿಳಿಸಿದರು.

ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಬಿಎಸ್ ವೈ ವಿರೋಧವಿತ್ತು. ಬಿಎಸ್ ವೈರಿಂದ ನಾನು ಯಾವುದೇ ಉಪಕಾರ ಪಡೆದಿಲ್ಲ ಎಂದು ಯತ್ನಾಳ್ ತಿಳಿಸಿದರು.

Key words: MLA –Basanagowda patil Yatnal – meet-BJP-party leaders