ಯಾವುದೇ ನಿರ್ಧಾರವಾದ್ರೂ ಡಿಕೆ ಶಿವಕುಮಾರ್ ಪಕ್ಷದ ವಿರುದ್ದ ನಿಲ್ಲಲ್ಲ- ಶಾಸಕ ಬಾಲಕೃಷ್ಣ

ಬೆಂಗಳೂರು,ಮೇ,26,2026 (www.justkannada.in):  ಹೈಕಮಾಂಡ್ ಯಾವುದೇ ನಿರ್ಧಾರ ಮಾಡಿದರೂ  ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ವಿರುದ್ದ ನಿಲ್ಲಲ್ಲ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಾಲಕೃಷ್ಣ,  2028ರ ಚುನಾವಣೆ ದೃಷ್ಠಿಯಿಂದ ಹೈಕಮಾಂಡ್ ನಾಯಕರು ಬೇಗ ಗೊಂದಲ ಬಗೆಹರಿಸಬೇಕು. ಡಿಕೆ ಶಿವಕುಮಾರ್ ಅವರು ಎಂದೂ ಪಕ್ಷದ ವಿರುದ್ದ ನಿರ್ಧಾರ ಮಾಡಲ್ಲ. ಹಿಂದೆ ಟಿಕೆಟ್ ಸಿಗದಿದ್ದಾಗಲೂ ಕಾಂಗ್ರೆಸ್ ಬಿಡಲಿಲ್ಲ. ಅವರು ಈಗಲೂ ಯಾವುದೇ ನಿರ್ಧಾರವಾದರೂ ಪಕ್ಷದ ವಿರುದ್ದ ನಿಲ್ಲಲ್ಲ ಎಂದರು.

ಡಿಕೆ ಶಿವಕುಮಾರ್ ಒಬ್ಬರಿಗೆ ಜವಾಬ್ದಾರಿ ಕೊಟ್ಟರೇ ಎಲ್ಲ ಆಗೋದಿಲ್ಲ.  ಡಿಕೆ ಶಿವಕುಮಾರ್ ಜೊತೆ ಉಳಿದೆಲ್ಲಾ ನಾಯಕರೂ ಕೂಡ ಇರಬೇಕಾಗುತ್ತೆ.  ಸಾಮೂಹಿಕ ನಾಯಕತ್ವದಲ್ಲಿಯೇ ಹೋಗಬೇಕಾಗುತ್ತದೆ.  ಸಿದ್ದರಾಮಯ್ಯರ ಸಾಮರ್ಥ್ಯವನ್ನೂ ನಾವು ಬಳಸಿಕೊಳ್ಳಬೇಕು ಎಂದು ಹೆಚ್ ಸಿ ಬಾಲಕೃಷ್ಣ ತಿಳಿಸಿದರು.

Key words: High command, decision, DK Shivakumar, MLA, Balakrishna