Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್: ಅವರ ಹೆಸರು ನನಗೆ ಮಾತ್ರ ಗೊತ್ತಿರಬೇಕು  ಎಂದ...

ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್: ಅವರ ಹೆಸರು ನನಗೆ ಮಾತ್ರ ಗೊತ್ತಿರಬೇಕು  ಎಂದ ಶಾಸಕ ಎಸ್.ಎ ರಾಮದಾಸ್.

ಮೈಸೂರು,ಆಗಸ್ಟ್,10,2021(www.justkannada.in):  ನನಗೆ ಸಚಿವ ಸ್ಥಾನ ಬೇಕಿತ್ತು. ನನಗೂ ಆಸೆ ಇತ್ತು. ಅದು ಮಿಸ್ ಆಯ್ತು. ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್. ಅವರದ್ದು ನನ್ನದು ಪ್ರೇಮ, ಅವರ ಹೆಸರು ನನಗೆ ಮಾತ್ರ ಗೊತ್ತಿರಬೇಕು. ಅವರಿಗೆ ಈಗಾಗಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಸಚಿವ  ಸ್ಥಾನ ಮುಂದೆ ಸಿಗುತ್ತೆ ಅನ್ನುವ ನಿರೀಕ್ಷೆಯೂ ಇಲ್ಲ. ಮಂತ್ರಿಯಾಗಿದ್ರೆ ರಾಜ್ಯಾದ್ಯಂತ ಓಡಾಡಬೇಕಿತ್ತು. ಈಗ ನನ್ನ ಕ್ಷೇತ್ರವೇ ಎಲ್ಲಾ ಆಗಿದೆ. ಅದಕ್ಕೆ ಈಗ ನಾನು ನನ್ನ ಕ್ಷೇತ್ರವನ್ನ ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿಸುವತ್ತ ಮುಂದಾಗಿದ್ದೇನೆ ಎಂದರು.

ಮುಂದೆ ಕೆ.ಆರ್.ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ಸಿಗಲಿದೆ. ಹಾಲಿ ಶಾಸಕ ರಾಮದಾಸ್‌ ಗೆ ಟಿಕೆಟ್ ಮಿಸ್ ಆಗಲಿದೆ ಎಂಬ ಚರ್ಚೆಯಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್, ಕಳೆದ 33 ವರ್ಷಗಳಿಂದ ಶತ್ರುಗಳಿದ್ದರು. ಆದರೆ ಪಕ್ಷಕ್ಕೆ ಬಂದವರು ಇವತ್ತು ಎಲ್ಲಾ ಹೊರಗೆ ಹೋಗಿದ್ದಾರೆ. ನಾನು ಮಾತ್ರ ಇನ್ನು ಪಕ್ಷದಲ್ಲೇ ಇದ್ದೀನಿ. ಮುಂದೆ ನನಗೆ ಟಿಕೆಟ್ ಸಿಗುವುದಿಲ್ಲ ಎಂದವರಿಗೆ ಹೈಕಮಾಂಡ್ ಉತ್ತರ ಕೊಡಲಿದೆ‌ ಎಂದು ಹೇಳಿದರು.

ಪಕ್ಷ ನನಗೆ ಎಲ್ಲವನ್ನು ನೀಡಿದೆ. ವಿರೋಧ ಮಾಡುವವರಿಗೆ ದೇವರು ಒಳ್ಳೆಯದ್ದು ಮಾಡಲಿ. ಇವತ್ತು ಮನೆ ಮನೆಗೆ ಬೈಕ್‌ ನಲ್ಲಿ ತೆರಳಿ ಕೆಲಸ ಮಾಡ್ತಿನಿ. ಸೂರಿಲ್ಲದವರಿಗೆ ಮನೆ ಕೊಡಿಸೋದು ನನ್ನ ಆದ್ಯತೆ. 24 ಗಂಟೆಗಳ ಕುಡಿಯೋ ನೀರಿನ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತೇನೆ ಎಂದು ಶಾಸಕ ರಾಮದಾಸ್ ತಿಳಿಸಿದರು.

Key words: missed –ministrial position-MLA-SA armadas-mysore