ದಾವಣಗೆರೆ,ಫೆಬ್ರವರಿ,28,2026 (www.justkannada.in): ಹೊಸ ಐವರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ 31 ಶಾಸಕರು ಹೈಕಮಾಂಡ್ ಗೆ ಪತ್ರ ಬರೆದ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ ಶಿವಗಂಗ, ಹೊಸಬರಿಗೆ ಸಚಿವ ಸ್ಥಾನ ನೀಡಿ: ಇದರಲ್ಲಿ ಮುಚ್ಚುಮರೆ ಇಲ್ಲ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜು ಶಿವಗಂಗಾ, ನಾಯಕತ್ವ ವಿಚಾರವಾಗಿ ಹೈಕಮಾಂಡ್ ಸ್ಪಷ್ಟಪಡಿಸಲಿ. ಅಧಿಕಾರ ಹಂಚಿಕೆ ಕುರಿತು ಮಾತುಕತೆ ಆಗಿದೆಯಾ? ಸಿಎಂ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರಾ? ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
31 ಶಾಸಕರು ಪತ್ರ ಬರೆದಿದ್ದಾರೆ . ನಾನು ಸಹ ಪತ್ರಕ್ಕೆ ಸಹಿ ಹಾಕಿದ್ದೇನೆ. ಹೊಸಬರಿಗೆ ಸಚಿವ ಸ್ಥಾನ ನೀಡಿ. ಇದರಲ್ಲಿ ಮುಚ್ಚುಮರೆ ಇಲ್ಲ ಎಂದು ತಿಳಿಸಿದರು.
ಮೊನ್ನೆ ಬಾಲಕೃಷ್ಣ ನೇತೃತ್ವದಲ್ಲಿ ಊಟ ಮಾಡಿದ್ದವು. ಈಗ ಕೇವಲ 40 ಶಾಸಕರು ಸೇರಿದ್ದೇವೆ. ಸಮಯ ಬಂದರೆ 134 ಶಾಸಕರನ್ನ ಸೇರಿಸಿ ಊಟ ಮಾಡುತ್ತೇವೆ ಎಂದು ಬಸವರಾಜ ಶಿವಗಂಗಾ ಹೇಳಿದರು.
Key words: ministerial posts, new MLAs, Shivaganga Basavaraj







