Friday, October 16, 2026

Dasara Wishes

Happy Dasara
Home Front Page ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮಾಹಿತಿ ಇಲ್ಲ- ಮಾಜಿ ಸಂಸದ ಡಿಕೆ ಸುರೇಶ್

ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಮಾಹಿತಿ ಇಲ್ಲ- ಮಾಜಿ ಸಂಸದ ಡಿಕೆ ಸುರೇಶ್

ಬೆಂಗಳೂರು,ಫೆಬ್ರವರಿ,28,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಬಣದ ಕೆಲ ಶಾಸಕರು ಖಾಸಗಿ ಹೋಟೆಲ್ ನಲ್ಲಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ ಕುರಿತು ಮಾಜಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.  ನಾನು ಊರಲ್ಲಿ ಇರಲಿಲ್ಲ ಹಾಗಾಗಿ ಅದರ ಬಗ್ಗೆ ಮಾಹಿತಿ ಇಲ್ಲ. ಶಾಸಕರ ತೀರ್ಮಾನ ವೈಯಕ್ತಿಕ ಪಕ್ಷ ಅದನ್ನು ಗಮನಿಸುತ್ತದೆ  ಎಂದರು.

ನನ್ನ ನಿಲುವು ಏನು ಎಂದು ಹೇಳಿದ್ದೇನೆ. ಪದೆ ಪದೇ   ಹೇಳಲು ಆಗಲ್ಲ. ಎಲ್ಲರಿಗೂ   ಸಿಎಂ ಅಗವ ಆಕಾಂಕ್ಷೆ ಇರುವುದರಲ್ಲಿ ತಪ್ಪೇನಿಲ್ಲ.  ಡಿಕೆ ಶಿವಕುಮಾರ್ ಬೆಂಬಲಕ್ಕೆ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಗೊತ್ತಿಲ್ಲ ಎಂದರು.

Key words:  MLAs, dinner meeting, Former MP, DK Suresh