ಮೈಸೂರು ನಗರ ಪಾಲಿಕೆ ನೂತನ ಆಯುಕ್ತರಿಗೆ ಸಚಿವ ವಿ.ಸೋಮಣ್ಣರಿಂದ ಹೃದಯ ಶ್ರೀಮಂತಿಕೆಯ ಪಾಠ..

ಮೈಸೂರು,ಸೆ,11,2019(www.justkannada.in): ನಮ್ಮ ಆಯುಕ್ತರು ಬುದ್ದಿವಂತ, ಇನ್ನೂ ಐದು ವರ್ಷ ಆದ್ರೆ ಇವರನ್ನ ಇಡಿಯೋಕೆ ಆಗೊಲ್ಲ. ಇವರ ಸ್ಟೈಲ್ ಬಹಳ ಚೆನ್ನಾಗಿದೆ. ಇವೆಲ್ಲದೆ ಜೊತೆ ಬಡವರ ಬಗ್ಗೆ ಹೃದಯವಂತಿಕೆ ಬೇಕು. ಇದು ಮೈಸೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಿಗೆ ಸಚಿವ ವಿ.ಸೋಮಣ್ಣ ಮಾಡಿದ ಹೃದಯ ಶ್ರೀಮಂತಿಕೆ ಬಗ್ಗೆಯ ಪಾಠ….

ಹೌದು, ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆಲವು ಸಲಹೆಗಳನ್ನ ನೀಡಿ ದಸರ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು. ಈ ವೇಳೆ ನೂತನ ಪಾಲಿಕೆ ಆಯುಕ್ತರಿಗೆ ಪಾಠ ಮಾಡಿದ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಮ್ಮಲ್ಲಿ ಚಿನ್ನದಂತ ಅಧಿಕಾರಿಗಳು ಇದ್ದಾರೆ. ಎಲ್ಲರೂ ಮಾನವಿಯತೆಯಿಂದ ಕೆಲಸ ಮಾಡಬೇಕು. ಇಂದಿನಿಂದ ದಯಮಾಡಿ ಕೆಲಸ ಮಾಡಿ. ನಿಮಗೆ ಆಗಿರುವ ಸಮಸ್ಯೆ ಬಗೆಹರಿಸಲು ಸಮಯ ನೀಡಿ. ಪಾಲಿಕೆ ಸಭೆಗೆ ಸಿಎಂ ಅವರನ್ನ ಕರೆದುಕೊಂಡು ಬರುತ್ತೇನೆ. ಕಳೆದ ಬಾರಿಯ ಬಾಕಿ ಹಣ ಏನಿದೆ ಅದನ್ನ ತಲುಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಪಡುತ್ತೇನೆ ಎಂದು ಭರವಸೆ ನೀಡಿದರು.

ತುರ್ತು ಕಾಮಗಾರಿಗಾಗಿ 5 ಕೋಟಿ ಹಣ ಪಾಲಿಕೆಗೆ ಬಿಡುಗಡೆಯಾಗಿದೆ. ಕೆಲಸಗಳನ್ನ ಮುಂದುವರೆಸಿ ದಸರಾ ಯಶಸ್ವಿಗೆ ಸಹಕರಿಸಿ ಎಂದು ಸಚಿವ ವಿ,ಸೋಮಣ್ಣ ಮನವಿ ಮಾಡಿದರು.

ಸಭೆಯಲ್ಲಿ ಅಧಿಕಾರಿಗಳ ವಿರುದ್ದ ವಿ.ಸೋಮಣ್ಣ ಸಿಡಿಮಿಡಿ…

ಸಭೆ ನಡೆಯುವ ವೇಳೆ ಸಚಿವ ವಿ,ಸೋಮಣ್ಣ ಅಧಿಕಾರಿಗಳು ವಿರುದ್ದ ಸಿಡಿಮಿಡಿಗೊಂಡ ಘಟನೆ ನಡೆಯಿತು.ಸಭೆಯಲ್ಲಿ ಹಣಕಾಸು ಅಧಿಕಾರಿ ಇಲ್ಲದಕ್ಕೆ ಅಸಮಾಧಾನ ಹೊರ ಹಾಕಿದ ಸಚಿವ ಸೋಮಣ್ಣ,  ಅಧಿಕಾರಿಗಳ ಉದ್ಧಟತನ ನನ್ನ ಹತ್ತಿರ ನಡೆಯಲ್ಲ.  ಶೀಘ್ರವೇ ಹಣಕಾಸು ಅಧಿಕಾರ ಇಲ್ಲಿಗೆ ಬರಬೇಕು. ಇಲ್ಲದಿದ್ದರೆ ಅವರನ್ನ ಶೀಘ್ರವೇ ರಿಲೀವ್ ಮಾಡಿ. ಸಭೆ ನಡೆಯುವ ಸಂದರ್ಭದಲ್ಲಿ ಇಲ್ಲಿ ಇರದೇ ಎಲ್ಲಿ ಇದ್ದಾರೆ. ಅವರು ನಿಮ್ಮ ಸಹೋದ್ಯೋಗಿ ನನಗಲ್ಲ ಅವರು ಇಲ್ಲಿ ಬರಬೇಕು ಅಷ್ಟೇ. ಇಂದು ಸಂಜೆಯೊಳೆಗೆ ಸೂಕ್ತ ದಾಖಲೆಗಳೋಂದಿಗೆ ಜಲದರ್ಶಿನಿ ತಲುಪಿಸಿ. ನಂತರ ಸಿಎಂರೊಂದಿಗೆ ಮಾತನಾಡಿ ೧೦ ಕೋಟಿ ಹಣ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

Key words:  minister- V Somanna­: lesson –mysore –city corporation-new Commissioner