ಶಿಕ್ಷಕರ ಕಡ್ಡಾಯ ವರ್ಗಾವಣೆಯಲ್ಲಿ ಮುಂದುವರೆದ ಗೊಂದಲ: ಮೈಸೂರಿನಲ್ಲಿ ಕೌನ್ಸಲಿಂಗ್ ಬಹಿಷ್ಕಾರ…..

ಮೈಸೂರು,ಸೆ,11,2019(www.justkannada.in): ಶಿಕ್ಷಕರ ಕಡ್ಡಾಯ ವರ್ಗಾವಣೆಯಲ್ಲಿ ಗೊಂದಲ ಮುಂದುವರೆದಿದ್ದು, ಮೈಸೂರಿನಲ್ಲಿ ಶಿಕ್ಷಕ ವರ್ಗ ಕೌನ್ಸಲಿಂಗ್ ಬಹಿಷ್ಕಾರ ಮಾಡಿದ ಘಟನೆ ನಡೆದಿದೆ.

ಇಂದಿನಿಂದ ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ನಡೆಸಲಾಗುತ್ತಿತ್ತು ಇದೊಂದು ಅವೈಜ್ಞಾನಿಕ ಪದ್ದತಿ ಎಂದು ಶಿಕ್ಷಕರು ಹಿಂದೆ ಸರಿದಿದ್ದಾರೆ  ನೋಟೀಸ್ ಬೋರ್ಡ್‌ ನಲ್ಲಿ  ನಿಗದಿ ಮಾಡಿರೊ ಸ್ಥಳವೆ ಬೇರೆ. ಆದರೆ ಕೌನ್ಸಲಿಂಗ್ ನಲ್ಲಿ ತೋರಿಸುವ ಸ್ಥಳಗಳೆ ಬೇರೆ ಎಂದು ಶಿಕ್ಷಕರು ಆರೋಪಿಸಿದ್ದು ಹೀಗಾಗಿ ಕೌನ್ಸಿಲಿಂಗ್ ಗೆ ಬಹಿಷ್ಕಾರ ಹಾಕಿದ್ದಾರೆ.

ಅಲ್ಲದೆ ಶೇ. 20 ರಷ್ಟು ಖಾಲಿ ಹುದ್ದೆಗೆ ಭರ್ತಿ ಮಾಡಲು ಶಿಕ್ಷಣ ಇಲಾಖೆ  ಮುಂದಾಗಿದ್ದು, ನಮ್ಮ ಜಿಲ್ಲೆಯಲ್ಲೇ ವರ್ಗಾವಣೆ ನೀಡಿ ಎಂದು  ಶಿಕ್ಷಕರು ಮನವಿ ಮಾಡಿದ್ದಾರೆ. ಕೌನ್ಸಿಲಿಂಗ್ ಬಹಿಷ್ಕರಿಸಿದ ಹಿನ್ನೆಲೆ ಇಲಾಖೆಯಿಂದ ಡಮ್ಮಿಕೌನ್ಸಿಲಿಂಗ್ ಮಾಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.

Key words: Continued- confusion – compulsory-transfer –teachers- boycott – Mysore