ಬೆಂಗಳೂರು,ಆಗಸ್ಟ್,17,2026 (www.justkannada.in): ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಮಾಡುವ ಆದೇಶವನ್ನು ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್, ಗುಟ್ಕಾ ಬ್ಯಾನ್ ಮಾಡುವ ಆದೇಶವನ್ನು ಹಿಡೆಯಲ್ಲ ಸಿಎಂ ಜೊತೆ ಮಾತನಾಡುತ್ತೇನೆ. ಗುಟ್ಕಾ ಬ್ಯಾನ್ ಮಾಡುವುದರಿಂದ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ಪಾನ್ ಮಸಾಲಾದಲ್ಲಿ ಮಿಕ್ಸ್ ಆಗಿ ಬಂದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಕನಿಷ್ಠ 3 ತಿಂಗಳೂ 4 ತಿಂಗಳು ಕಾದು ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಯುಟಿ ಖಾದರ್ ಸ್ಪಷ್ಟನೆ ನೀಡಿದರು.
Key words: Gutka ,ban, order not, withdrawn, Minister, U.T. Khader











