Saturday, September 19, 2026

BDA Apartments

ಶ್ರೀರಾಮುಲು ಅವರಿಗೆ ಡಿಪ್ರಮೋಟ್ ಆಗಿಲ್ಲ- ಸಚಿವ ಡಾ.ಕೆ ಸುಧಾಕರ್… BDA JK_Adv BDA Adv
Home Front Page  ಶ್ರೀರಾಮುಲು ಅವರಿಗೆ ಡಿಪ್ರಮೋಟ್ ಆಗಿಲ್ಲ- ಸಚಿವ ಡಾ.ಕೆ ಸುಧಾಕರ್…

 ಶ್ರೀರಾಮುಲು ಅವರಿಗೆ ಡಿಪ್ರಮೋಟ್ ಆಗಿಲ್ಲ- ಸಚಿವ ಡಾ.ಕೆ ಸುಧಾಕರ್…

ಬೆಂಗಳೂರು,ಅಕ್ಟೋಬರ್,13,2020(www.justkannada.in): ಆರೋಗ್ಯ ಖಾತೆ ಹಿಂಪಡೆದ ಹಿನ್ನೆಲೆ ಅಸಮಾಧಾನಗೊಂಡಿದ್ದ ಸಚಿವ ಶ್ರೀರಾಮುಲು ಅವರನ್ನ ಕರೆಸಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದು ಸಂದಾನ ಯಶಸ್ವಿಯಾಗಿದೆ.jk-logo-justkannada-logo

ಈ ನಡುವೆ ಸಿಎಂ ನಿವಾಸ ಕಾವೇರಿ ನಿವಾಸಕ್ಕೆ ಇಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರನ್ನ ಕರೆಸಿಕೊಂಡು ಸಿಎಂ ಬಿಎಸ್ ಯಡಿಯೂರಪ್ಪ ಸಂದಾನ ಮಾಡಿ ಉತ್ತಮವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಸಿಎಂ ಬೇಟಿ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಮುಲು ನನಗಿಂತ ಹಿರಿಯರು. ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿದ್ದಾರೆ. ರಾಮುಲು ಅವರಿಗೆ‌ ಬಹುದೊಡ್ಡ ಜವಾಬ್ದಾರಿಯನ್ನು ಸಿಎಂ ನೀಡಿದ್ದಾರೆ. ರಾಮುಲು ಅವರಿಗೆ ಡಿಪ್ರಮೋಟ್ ಆಗಿಲ್ಲ ಎಂದರು.

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಕೆಳ ಹಂತದಲ್ಲಿ ಸಮನ್ವಯದ ಕೊರತೆ ಇದ್ದ ಕಾರಣ ಸಿಎಂ ಈ ತೀರ್ಮಾನ ಮಾಡಿದ್ದಾರೆ. ರಾಮುಲು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ ಎಂದು ಸುಧಾಕರ್ ತಿಳಿಸಿದರು.minister-sriramulu-not-dipramot-minister-dr-k-sudhakar-meet-cm-bs-yeddyurappa

ಸಿಎಂ ನಮ್ಮೆಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಸುಧಾಕರ್ ತಿಳಿಸಿದರು.

Key words: minister- Sriramulu – not – dipramot-Minister- Dr K Sudhakar-meet –cm bs yeddyurappa