ಜಾತಿ ಗಣತಿ ಸಮೀಕ್ಷೆ ವರದಿ: ಲಿಖಿತ ಉತ್ತರ ನೀಡಿದ ಸಚಿವ ಶಿವರಾಜ್ ತಂಗಡಗಿ

ಬೆಳಗಾವಿ,ಡಿಸೆಂಬರ್,10,2025 (www.justkannada.in):  ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿ ಸಿದ್ದಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್, ರಾಜ್ಯ ಸರ್ಕಾರಗಳು ಜಾತಿ ಸಮೀಕ್ಷೆ ನಡೆಸಲು ಅವಕಾಶವಿಲ್ಲ ಜಾತಿ ಸಮೀಕ್ಷೆ ನಡೆಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ವಿಧಾನ ಸಭೆಯಲ್ಲಿ ಈ ಬಗ್ಗೆ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ಎಂದು  ತಿಳಿಸಿದರು.

ಇದಕ್ಕೆ ಲಿಖಿತ ಉತ್ತರ  ನೀಡಿದ ಸಚಿವ ಶಿವರಾಜ್ ತಂಗಡಗಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಸಮೀಕ್ಷೆ ಡಿಜಿಟಲ್ ಮಾದರಿಯಲ್ಲಿ ಕೈಗೊಳ್ಳಲಾಗಿದ್ದು  ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ವರದಿ ಸಿದ್ದಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.  ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು ಆಯೋಗದಿಂದ ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ ಸಮೀಕ್ಷೆಗೆ 348. 36 ಕೋಟಿ ಅನುದಾನ ಒದಗಿಸಲಾಗಿದೆ. ಸಮೀಕ್ಷೆದರರಿಗೆ  5 ಸಾವಿರ ರೂ ಒಂದು ಮತ್ತು ಇಬ್ಬರಿರುವ ಸದಸ್ಯರ ಮನೆಗಳನ್ನ ಸಮೀಕ್ಷ ಮಾಡಿರುವವರಿಗೆ ತಲಾ 50 ರೂ.    ಮೂರು ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳನ್ನ ಸಮೀಕ್ಷೆ ಮಾಡಿರುವವರಿಗೆ ವರಿಗ ತಲಾ100ರೂ ಮೇಲ್ವಿಚಾರಕರಿಗೆ ಸಾವಿರ ರೂ ಗೌರವ ಸಂಭಾವನೆ ನೀಡಲಾಗಿದೆ ಎಂದು ತಿಳಿಸಿದರು.

Key words: Caste Census, Survey, Report, Minister, Shivraj Thangadgi