Wednesday, August 19, 2026

BDA Apartments

Home Front Page ಸಚಿವೆ ಶಶಿಕಲಾ ಜೊಲ್ಲೆ ‘ಒಂದು ಮೊಟ್ಟೆಯ ಕಥೆ’ ! ಬಯಲಿಗೆಳೆದ ಖಾಸಗಿ ಸುದ್ದಿವಾಹಿನಿ

ಸಚಿವೆ ಶಶಿಕಲಾ ಜೊಲ್ಲೆ ‘ಒಂದು ಮೊಟ್ಟೆಯ ಕಥೆ’ ! ಬಯಲಿಗೆಳೆದ ಖಾಸಗಿ ಸುದ್ದಿವಾಹಿನಿ

ಬೆಂಗಳೂರು, ಜುಲೈ 24, 2021 (www.justkannada.in): ‘ಕಾಸಿಗಾಗಿ ಮೊಟ್ಟೆ’ ರಹಸ್ಯ ಕಾರ್ಯಚರಣೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಿಕ್ಕಿ ಬಿದ್ದಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

‘ಮಾತೃಪೂರ್ಣ’ ಯೋಜನೆಯಡಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ರಹಸ್ಯ ಕಾರ್ಯಚರಣೆಯಲ್ಲಿ ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಯೋಜನೆಯಡಿ ಹಣ ದುರ್ಬಳಕೆ ಯನ್ನು ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶಾಸಕ ಪರಣ್ಣ ಮುನವಳ್ಳಿ ಸಿಕ್ಕಿ ಬಿದ್ದಿರುವುದು ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಸಿಲುಕಿಸಿದೆ.

ಗರ್ಭಿಣಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಪಕ್ಷದ ವತಿಯಿಂದಲೂ ಪ್ರತಿಭಟನೆ ನಡೆಸಿದೆ.