ಮಾನವೀಯ ನೆಲೆ ಗಟ್ಟಿನ ಮೇಲೆ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ವೈದ್ಯರಿಗೆ ಸಚಿವೆ ಶಶಿಕಲಾ ಜೊಲ್ಲೆ ಸಲಹೆ..

ವಿಜಯಪುರ,ಏಪ್ರಿಲ್,23,2021(www.justkannada.in): ಕೊರೋನಾ ಮಹಾಮಾರಿಯ ಎರಡನೇ ಅಲೆಯಂತಹ  ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದು, ಜನತೆಗಾಗಿ ಅಮೂಲ್ಯ ಸೇವೆ ಕಲ್ಪಿಸುವಂತೆ ಮಹಿಳಾ‌ ಮತ್ತು ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ವೈದ್ಯರಿಗೆ ಸಲಹೆ ನೀಡಿದ್ದಾರೆ.jk

ವಿಜಯಪುರದ ನೂತನ ಪ್ರವಾಸಿ ಮಂದಿರದಲ್ಲಿಂದು ಸರ್ಕಾರಿ ಹಾಗೂ ಖಾಸಗಿ ವೈದ್ಯರೊಂದಿಗೆ ಸಭೆ ನಡೆಸಿ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ, ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಅವಶ್ಯಕತೆಗೆ ತಕ್ಕಂತೆ ಸೇವೆ ಕಲ್ಪಿಸಬೇಕು ಎಂದು ಹೇಳಿದರು.Minister- Shashikala Jolle- advises- doctors - treat -patients - humanitarian

ಇದೇ ವೇಳೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳನ್ನು ನಿವಾರಿಸಬೇಕು. ಆಕ್ಸಿಜನ್, ಬೆಡ್‍ಗಳ ಕೊರತೆಯಾಗದಂತೆ ನಿಗಾವಹಿಸಬೇಕು. ತುರ್ತು ಚಿಕಿತ್ಸೆಗೆ ತಕ್ಷಣ ಸ್ಪಂದಿಸುವಂತೆ ಸಲಹೆ ನೀಡಿದರು.

ಅದೇ ರೀತಿ ನಗರದ ಗಾಂಧೀಚೌಕ್ ಬಳಿ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ -19 ಲಸಿಕೆ ನೀಡುವ ಕಾರ್ಕ್ರಮಕ್ಕೆ ಚಾಲನೆ‌ ನೀಡಿದ ಸಚಿವೆ ಶಶಿಕಲಾ ಜೊಲ್ಲೆ, ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ, ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಬೇಡಿ ಎಂದು ಕರೆ‌ ನೀಡಿದರು.

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ದೇಶೀಯ ಲಸಿಕೆಗಳಾಗಿರೋದ್ರಿಂದ ಎಲ್ಲರೂ ಅಭಿಮಾನ ಪಡುವಂತಹ ವಿಷಯವಾಗಿದ್ದು, ಯಾವುದೇ ವದಂತಿಗಳ ಕಡೆಗೆ ಗಮನ ಹರಿಸದೇ ನಿಮ್ಮ ಸುರಕ್ಷತೆಗಾಗಿ ಲಸಿಕೆ‌ ಪಡೆಯಿರಿ ಅಂತ ಸಲಹೆ ನೀಡಿದರು.

ENGLISH SUMMARY…

Minister Shashikala Jolle advices doctors to treat patients with humanity
Vijayapura, Apr. 23, 2021 (www.justkannada.in): Women and Welfare Minister Shashikala Jolle expressed her view that the entire country is sweeping under the second wave of the COVID-19 Pandemic and requested the medical fraternity to treat patients with a human heart and save the people.
She conducted a meeting with the government and private doctors today at the new Travellers Bungalow in Vijayapura to know the requirements and understand the COVID pandemic condition in the district. On the occasion, she requested the doctors to treat COVID patients as per their requirements.
“I request all the medical fraternity to respond properly to the woes of the people and take precautions to ensure that there will be no shortage of oxygen.” She also appealed to the doctors to give immediate attention to emergency cases.Minister- Shashikala Jolle- advises- doctors - treat -patients - humanitarian
Minister Shashikala Jolle also launched the COVID-19 vaccination program to the teaching and non-teaching staff organized by the Education Department, near the Gandhi Chowk in Vijayapura. She urged all the eligible citizens not to listen to rumors and take vaccination without fail.
“Covishield and Covaxin vaccinations are produced in India and it is indeed a matter of pride for all of us. Hence, please don’t listen to any kind of rumors and take the vaccination and stay safe,” she added.
Keywords: COVID-19 Pandemic/ vaccination/ Minister Shashikala Jolle/ Vijayapura

Key words: Minister- Shashikala Jolle- advises- doctors – treat -patients – humanitarian