Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಖರ್ಗೆ ಅವರಿಂದ ಆದಷ್ಟು ಬೇಗ ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುವ ಭರವಸೆ- ಸಚಿವ ಸತೀಶ್ ಜಾರಕಿಹೊಳಿ

ಖರ್ಗೆ ಅವರಿಂದ ಆದಷ್ಟು ಬೇಗ ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುವ ಭರವಸೆ- ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ,ಫೆಬ್ರವರಿ,21,2026 (www.justkannada.in): ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗೊಂದಲ ವಿಚಾರವನ್ನು ಆದಷ್ಟು ಬೇಗೆ ಬಗೆಹರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಕೆ.ಎನ್ ರಾಜಣ್ಣ ಭೇಟಿಯಾಗಿ ಚರ್ಚಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ ಭೇಇಟ ಭೇಟಿ ಮಾಡಿ ರಾಜ್ಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಗೊಂದಲ ಬಗೆಹರಿಸಿ ಎಂದಿದ್ದೇವೆ. ಸಾಧ್ಯವಾದಷ್ಟು ಬೇಗ ಗೊಂದಲ ನಿವಾರಿಸುತ್ತೇವೆ ಎಂದಿದ್ದಾರೆ ಗೊಂದಲವಿದ್ದರೇ ಆಡಳಿತ ನಿರ್ವಹಣೆ ಕಷ್ಟವಾಗುತ್ತೆ ಎಂದರು.

Key words: Minister, Satish Jarkiholi, KN Rajanna, meet, Mallikarjun Kharge