ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ರೆ  2 ವರ್ಷ ನಮ್ಮನ್ನು ಮಲಗಲು ಬಿಡಲ್ಲ-ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಏಪ್ರಿಲ್,10,2026 (www.justkannada.in):  ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆದ್ದರೆ ಎರಡು ವರ್ಷ ನಮ್ಮನ್ನು ಮಲಗಲು ಬಿಜೆಪಿಯವರು ಬಿಡಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ಶಿಗ್ಗಾಂವಿಗೂ ಬಾಗಲಕೋಟೆ ಕ್ಷೇತ್ರಕ್ಕೂ ಹೋಲಿಕೆ ಸಾಧ್ಯವಿಲ್ಲ. ಸ್ಟಡಿ  ಮಾಡಿದ ಮೇಲೆ ಏನು ಕೆಲಸ ಆಗಬೇಕೆಂಬುದು ಗೊತ್ತಾಯಿತು.  ಬಾಗಲಕೋಟೆ ಕ್ಷೇತ್ರ ಕಾಂಗ್ರೆಸ್ ಸೀಟ್. ಒಂದೇ ಒಂದು ಕ್ಷೇತ್ರ  ಸೋತರೂ ಬಿಜೆಪಿಗರು ಮಲಗಲು ಬಿಡಲ್ಲ.  ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ 2 ವರ್ಷ ನಮ್ಮನ್ನು ಮಲಗಲು ಬಿಡಲ್ಲ ನಾವೇ ಗೆದ್ದರೆ ಸ್ವತಂತ್ರವಾಗಿ ಆಡಳಿತ ಮಾಡಬಹುದು ಮತದಾರರನ್ನ ಸೆಳೆಯುವ ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ ಮತದಾರರ ಬಳಿ ಹೋಗಬೇಕು ಅವರನ್ನು ಮನವೊಲಿಬೇಕು ಎಂದರು.

ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ. ಪಕ್ಷದಲ್ಲಿರುವ ಗೊಂದಲವನ್ನು ಹೈಕಮಾಂಡ್  ಇತ್ಯರ್ಥಪಡಿಸಲಿ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಫಲಿತಾಂಶದ  ಬಗ್ಗೆ ಕಾಯುವ ಅಗತ್ಯವಿಲ್ಲ. ಈ  ಬಗ್ಗೆ ಗಮನ ಹರಿಸಬೇಕು ಸಚಿವ ಸಂಪುಟ ಪಕ್ಷದ ಅಧ್ಯಕ್ಷ,  ನಿಗಮ ಮಂಡಳಿ, ನೇಮಕಾತಿಗಳು ಸೇರಿ ಎಲ್ಲಾ ಗೊಂದಲಗಳನ್ನು ಹೈಕಮಾಂಡ್  ಇತ್ಯರ್ಥ ಮಾಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.

Key words: BJP, wins, both constituencies, Minister, Sathish Jarkiholi