Wednesday, August 26, 2026

BDA Apartments

Home Front Page ಏ.16 ರಂದು ಸಚಿವ ಸಂಪುಟ ಸಭೆ ನಿಗದಿ: ಒಳಮೀಸಲಾತಿ ಚರ್ಚೆ ಸಾಧ್ಯತೆ

ಏ.16 ರಂದು ಸಚಿವ ಸಂಪುಟ ಸಭೆ ನಿಗದಿ: ಒಳಮೀಸಲಾತಿ ಚರ್ಚೆ ಸಾಧ್ಯತೆ

ಬೆಂಗಳೂರು,ಏಪ್ರಿಲ್,10,2026 (www.justkannada.in): ಏಪ್ರಿಲ್ 16 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಒಳಮೀಸಲಾತಿ ಸೇರಿದಂತೆ ಹಲವು ವಿಚಾರ ಚರ್ಚೆಯಾಗಲಿದೆ.

ಏಪ್ರಿಲ್ 16 ರಂದು ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯವಾಗಿ ಈ ಸಭೆಯಲ್ಲಿ ಒಳಮೀಸಲಾತಿ ಗೊಂದಲಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಉದ್ಬವಿಸಿರುವ ಒಳಮೀಸಲಾತಿ ಗೊಂದಲ ವಿಚಾರದಿಂದಾಗಿ ನೇಮಕಾತಿಗಳಿಗೆ ತಡೆ ಬಿದ್ದಿದ್ದು ಇದರಿಂದಾಗಿ ಸರ್ಕಾರಿ ಹುದ್ದೆಗಳಿಗಾಗಿ ಓದುತ್ತಿರುವ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಅತಂತ್ರವಾಗಿದೆ. ಹೀಗಾಗಿ ಒಳಮೀಸಲಾತಿ ಗೊಂದಲ ಬೇಗ ಬಗೆಹರಿದು ನೇಮಕಾತಿಗಳು ಕೂಡಲೇ ಆರಂಭವಾಗಬೇಕೆಂಬುದು ಉದ್ಯೋಗಾಕಾಂಕ್ಷಿಗಳ ಆಶಯವಾಗಿದೆ.

ಇನ್ನು  ಒಳಮೀಸಲಾತಿ ಜಾರಿ  ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಮಾರ್ಚ್ 27  ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಆದರೆ ಉಪಚುನಾವಣೆ ಹಿನ್ನೆಲೆ ಸರ್ಕಾರ ವಿಶೇಷ ಸಭೆಯನ್ನು ಮುಂದೂಡಿಕೆ ಮಾಡಿದೆ. ಇದೀಗ ಉಪಚುನಾವಣೆ ಮುಗಿದಿದ್ದು ಏಪ್ರಿಲ್ 16 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಗೊಂದಲದ ಬಗ್ಗೆ ಚರ್ಚೆಯಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Key words: Cabinet meeting, scheduled, April 16, internal reservation