5 ಸಾವಿರ ಕೋಟಿ ರೂ. ಗೃಹಲಕ್ಷ್ಮೀ ಹಣ: ಹಣಕಾಸು ಇಲಾಖೆ ಸ್ಪಷ್ಟನೆ ನೀಡಲಿ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಡಿಸೆಂಬರ್,25,2025 (www.justkannada.in):  ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ, ಮಾರ್ಚ್ ಹಣ ದುರ್ಬಳಕೆಯಾಗಿಲ್ಲ. ಹಣಕಾಸು ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ, ಮಾರ್ಚ್ ತಿಂಗಳ ಹಣ ಎಲ್ಲೂ ಹೋಗಿಲ್ಲ.  ಇನ್ನೂ ಆ ಎರಡು ತಿಂಗಳ ಹಣವೇ ಹಾಕಿಲ್ಲ. ಹಣ ದುರ್ಬಳಕೆ ಆಗಿಲ್ಲ  ಆ ಹಣದ ಬಗ್ಗೆ ಹಣಕಾಸು ಇಲಾಖೆ ಸ್ಪಷ್ಟನೆ ನೀಡಬೇಕು ಎಂದರು.

ತಿಂಗಳ ಹಣದಲ್ಲಿ ವ್ಯತ್ಯಾಸ ಆಗಿರಬಹುದು ಅಷ್ಟೆ. 5 ಸಾವಿರ ಕೋಟಿ ಎಲ್ಲಾದರೂ ಹೋದರೆ ಐಟಿಯವರು ಸುಮ್ಮನೆ ಬಿಡುತ್ತಾರಾ?  ಬಿಜೆಪಿ ಪ್ರಚಾರ ಮಾಡಿದಂತೆ ಹಣ ದುರ್ಬಳಕೆ ಆಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

Key words: Rs 5,000 crore, Griha Lakshmi, money, Minister, Sathish Jarkiholi