Friday, September 18, 2026

BDA Apartments

ರಾಜ್ಯದಲ್ಲಿ SIR ಮ್ಯಾಪಿಂಗ್: ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ- ಸ...
Home Front Page ರಾಜ್ಯದಲ್ಲಿ SIR ಮ್ಯಾಪಿಂಗ್: ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ- ಸಚಿವ ಸಂತೋಷ್ ಲಾಡ್

ರಾಜ್ಯದಲ್ಲಿ SIR ಮ್ಯಾಪಿಂಗ್: ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ- ಸಚಿವ ಸಂತೋಷ್ ಲಾಡ್

ಬೆಂಗಳೂರು,ಮೇ,15,2026 (www.justkannada.in): ದೇಶದಲ್ಲಿ ಎಸ್ ಐಆರ್ ಮ್ಯಾಪಿಂಗ್ ಶುರುವಾಗಿದ್ದು,  ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಎಸ್ ಐಆರ್ ಮ್ಯಾಪಿಂಗ್ ಶುರುವಾಗಿದ್ದು,  13 ಕೋಟಿ ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ.   ಮುಂಬರುವ ಚುನಾವಣೆಯಲ್ಲಿ ಮತ ಹಾಕಬಹುದಾ ಇಲ್ವಾ? ಇವರೆಲ್ಲಾ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.

ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರನ್ನ ಮತದಾನದಿಂದ ಹೊರಗಿಟ್ಟಿದ್ದಾರೆ. ಅಲ್ಲಿ ಎಸ್ ಐಆರ್ ಮತ್ತು ಚುನಾವಣೆ ಎರಡೂ ಮುಗಿದಿದೆ ಈಗ  ಅವರೆಲ್ಲಾ ಏನು ಮಾಡಬೇಕು  ಎಲ್ಲದಕ್ಕೂ ಜ್ಞಾನೇಶ್ ಕುಮಾರ್ ಗೆ ಮ್ಯಾನ್ ಆಫ್ ದಿ ಮ್ಯಾಚ್  ಎಂದು  ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ SIR ಮ್ಯಾಪಿಂಗ್ jk02_new jk02 new

Key words: SIR, mapping, Minister, Santosh Lad