Tuesday, August 11, 2026

BDA Apartments

Home Front Page 2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ಯೋಜನೆ ಬಂದೇ ಬರುತ್ತೆ – ಸಚಿವ ರಾಮಲಿಂಗರೆಡ್ಡಿ

2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ಯೋಜನೆ ಬಂದೇ ಬರುತ್ತೆ – ಸಚಿವ ರಾಮಲಿಂಗರೆಡ್ಡಿ

ಕೋಲಾರ,ಆಗಸ್ಟ್,11,2026 (www.justkannada.in): 2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ಯೋಜನೆ ಜಾರಿಗೆ ಬಂದೇ ಬರುತ್ತೆ ಎಂದು ಜಲಸಂಪನ್ಮೂಲ  ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರ, ಮೇಕೆದಾಟು ಯೋಜನೆ,  ಮಹದಾಯಿ ನೀರಿನ ವಿಚಾರದಲ್ಲಿ ಕುಳಿತು ಚರ್ಚೆ ನಡೆಸಿದರೇ ಒಳ್ಳೆಯದು. ಅಕ್ಕಪಕ್ಕದ ರಾಜ್ಯದವರು ಕುಳತುಕೊಂಡು ಮಾತನಾಡಿದರೇ ಒಳ್ಳೆಯದು. ಮುಂದಿನ ವರ್ಷದಿಂದ ಜಿಲ್ಲೆಯಲ್ಲಿ ಎತ್ತಿನ ಹೊಳೆಯಿಂದ ನೀರು ಹರಿಯಲಿದೆ ಎಂದರು.

ಕೆಸಿ ವ್ಯಾಲಿ ನೀರು ಕೋಲಾರಕ್ಕೆ ಬಂದಾಗ ನಾನು ಕೂಡ ಪೂಜೆ ಮಾಡಿದ್ದೆ.  ನಾನು ಆಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ ಎಂದರು ಸಚಿವ ರಾಮಲಿಂಗರೆಡ್ಡಿ.

ಆಗಸ್ಟ್ 13 ರಿಂದ ಅಧಿವೇಶನ ನಡೆಯಲಿದೆ ಅಷ್ಟರಲ್ಲಿ ಖಾತೆ ಹಂಚಿಕೆಯಾಗಲಿ. ನಾನು ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ. ಯಾವುದೇ ಖಾತೆ ನೀಡಿದರೂ ಕೆಲಸ ಮಾಡುವೆ.  ಈವರೆಗೂ 10 ಇಲಾಖೆಗಳಲ್ಲಿ ಕೆಲಸ ಮಾಡಿದ್ದೀನಿ 1993ರಲ್ಲಿ ಮೊದಲ ಬಾರಿ ಸಚಿವನಾಗಿದ್ದೆ ಎಂದರು.

Key words: 2027, Ettinhole project, Kolar, Minister, Ramalingareddy