ತುಮಕೂರು,ಆಗಸ್ಟ್,11,2026 (www.justkannada.in): ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ತುಮಕೂರಿನಲ್ಲಿ ಬರ ವೀಕ್ಷಣೆ ನಡೆಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಡಿಸಿಎಂ ಪರಮೇಶ್ವರ್ ಬರ ವೀಕ್ಷಣೆ ನಡೆಸಿದರು. ಗ್ರಾಮದಲ್ಲಿ ಸಿಎಪಿ ಅನದಾನದಡಿ ಕುಡಿಯುವ ನೀರಿನ ಬೋರ್ ವೆಲ್ ಪರಿಶೀಲನೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಹಾಗೆಯೇ ಇದೇ ವೇಳೆ ಡಿಸಿಎಂ ಪರಮೇಶ್ವರ್ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಗ್ರಾಮದಲ್ಲಿ ಕಸ ವಿಲೇವಾರಿ ಆಸ್ಪತ್ರೆ ಸಮಸ್ಯೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಬಗ್ಗೆ ಶೀಘ್ರ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಗೆ ಸೂಚನೆ ನೀಡಿದರು.
Key words: Drought, Tumakur, DCM, Parameshwar











