ಬೆಂಗಳೂರು,ಮೇ,13,2026 (www.justkannada.in): ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ನಾವೇ ಪಾಲಿಕೆ ಸದಸ್ಯರ ಕೆಲಸ ಮಾಡುತ್ತಿದ್ದೇವೆ. ಜಿಬಿಎ ಚುನಾವಣೆ ಮಾಡಿ ಅಂತಾನೇ ನಾನು ಹೇಳುತ್ತೇನೆ. ಚುನಾವಣೆಯಾದರೆ ಕಾಂಗ್ರೆಸ್ ಗೆ ಹೆಚ್ಚು ಮತಗಳು ಬರಲಿವೆ ಎಂದರು.
ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾದರೆ ಇಲಾಖೆಗೆ ಹೊರೆಯಾಗುತ್ತದೆ . ನಮ್ಮಲ್ಲಿ 26 ಸಾವಿರ ಬಸ್ ಗಳು 1700 ಎಲೆಕ್ಟ್ರಕ್ ಬಸ್ ಗಳು ಇವೆ. ಡಿಸೆಲ್ ಬೆಲೆ ಏರಿಕೆ ಮಾಡದಿದ್ದರೆ ಸಂತೋಷ ಎಂದರು.
ವೇತನ ಪರಿಷ್ಕರಣೆಗೆ ಸಾರಿಗೆ ನೌಕರರು ಒಪ್ಪದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ನಾವು ಸರ್ಕಾರದ ತೀರ್ಮಾನವನ್ನು ಹೇಳಿದ್ದೇವೆ ಎಂದರು.
ಸಂಫುಟ ಪುನಾರಚನೆಗೆ ಶಾಸಕರ ಒತ್ತಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಎರಡುವರೆ ವರ್ಷಗಳ ಬಳಿಕ ಆಗುತ್ತೆಂಬ ನಿರೀಕ್ಷೆ ಇತ್ತು. ಪವರ್ ಶೇರಿಂಗ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
Key words: Congress, GBA, elections, Minister, Ramalingareddy







