ಬೆಂಗಳೂರು,ಆಗಸ್ಟ್,6,2025 (www.justkannada.in): ಕರ್ತವ್ಯಕ್ಕೆ ಗೈರಾಗಿ ನಿನ್ನೆ ಮುಷ್ಕರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಾರಿಗೆ ನೌಕರರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದ್ದು ಈ ಕುರಿತು ಸಾರಿಗೆ ಇಲಾಖೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಹೈಕೋರ್ಟ್ ಆದೇಶದ ಮಧ್ಯೆಯೂ ಮುಷ್ಕರ ನಡೆಸಿದ್ದಾರೆ. ಹೀಗಾಗಿ ನೋಟಿಸ್ ನೀಡಲಾಗಿದೆ. ಆದರೆ ನೌಕರರು ನೋಟಿಸ್ ಬಗ್ಗೆ ಭಯ ಆತಂಕ ಪಡುವ ಆಗತ್ಯವಿಲ್ಲ ಎಂದಿದ್ದಾರೆ.
38 ತಿಂಗಳ ಬಾಕಿ ವೇತನ ಮತ್ತು ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನಿನ್ನೆ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದು ಮುಷ್ಕರವನ್ನ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.
Key words: Transport, employees, notices, Minister, Ramalingareddy