ನನ್ನ ವಿರುದ್ಧ ಆರ್.ಅಶೋಕ್ ಸ್ಪರ್ಧೆ ಮಾಡುವುದಾದರೇ  ಅವರಿಗೆ ಸ್ವಾಗತ –ಡಿ.ಕೆ ಶಿವಕುಮಾರ್.

ಚಿಕ್ಕಮಗಳೂರು,ಏಪ್ರಿಲ್,10,2023(www.justkannada.in):   ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಚಿವ ಆರ್.ಅಶೋಕ್ ಸ್ಪರ್ಧಿಸುತ್ತಾರೆಂಬ ಸುದ್ಧಿ ಹಬ್ಬಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ನನ್ನ ವಿರುದ್ಧ ಆರ್.ಅಶೋಕ್ ಸ್ಪರ್ಧೆ ಮಾಡುವುದಾದರೇ ಅವರಿಗೆ ಸ್ವಾಗತಿಸುವೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ರಾಜಕಾರಣದಲ್ಲಿ ಯಾರೇ ಬಂದರೂ ಎದರಿಸಬೇಕು. ಹೋರಾಟ ಮಾಡಬೇಕು. ರಾಜಕಾರಣದಲ್ಲಿ ಯಾರ ಯಾರ ವಿರುದ್ದವಾದರೂ ನಿಲ್ಲಬಹುದು. ಅಶೋಕ್ ಸ್ಪರ್ಧೆ ಮಾಡುವುದಾದರೇ ಅವರಿಗೆ ನನ್ನ ಸ್ವಾಗತವಿದೆ ಎಂದರು.

ಸಿಎಂ ಅಭ್ಯರ್ಥಿ ಸ್ಥಾನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೆಸರು ಪ್ರಸ್ತಾಪ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಖರ್ಗೆಗೆ ಹಿಂದೆ ಅನ್ಯಾಯ ಆಗಿದೆ ಎಂಬ ಕೂಗಿದೆ.  ಕಾಂಗ್ರೆಸ್ ಪಕ್ಷ ಏನು ಹೇಳುತ್ತದೆಯೋ ನೋಡಣ.  ಮಲ್ಲಿಕಾರ್ಜುನ ಖರ್ಗೆ ಇದುವರೆಗೆ ಏನು ಕೇಳಿಲ್ಲ.  ಪಕ್ಷ  ಹೇಳಿದಂತೆ ನಾವೆಲ್ಲರೂ ಕೇಳಬೇಕು. ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ 3ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

Key words: minister-R.Ashok – welcome – compete- against –me-DK Shivakumar.