Friday, August 14, 2026

BDA Apartments

Home Front Page ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ‘ಕೈ’ ನಾಯಕ ಎಂಬಿ ಪಾಟೀಲ್ ಗೆ ಸಚಿವ...

ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ‘ಕೈ’ ನಾಯಕ ಎಂಬಿ ಪಾಟೀಲ್ ಗೆ ಸಚಿವ ಆರ್.ಆಶೋಕ್ ಟಾಂಗ್.

ಬೆಂಗಳೂರು.20.2021(www.justkannada.in) ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸಿಗರ ಸಿಂಪತಿ ಬಿಜೆಪಿಗೆ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಆಶೋಕ್ ಆವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.jk

ಬಿ.ಎಸ್.ವೈಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ಬೆಂಬಲದ ವಿಚಾರವಾಗಿ  ಬೆಂಗಳೂರಿನಲ್ಲಿ ಮಾಧ್ಯಮದ ಜೂತೆ ಮಾತನಾಡಿದ ಸಚಿವ ಆರ್.ಆಶೋಕ್,  ಎಂ.ಬಿ ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಮುಖ್ಯಮಂತ್ರಿಯ ಬಗ್ಗೆ ಸಿಂಪತಿ ತೋರುವುದು ಬೇಡ. ನಮ್ಮ ನಾಯಕರಿಗೆ ಯಾವ ರೀತಿಯಾದ ಗೌರವವನ್ನು ನೀಡಬೇಕು ಎಂಬುದು ಬಿಜೆಪಿ ಪಕ್ಷಕ್ಕೆ ತಿಳಿದಿದೆ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳಿಕೆಯನ್ನು ನೀಡಿಲ್ಲ. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ ಅಷ್ಟೇ. ಇದಕ್ಕೆ ಕಾಂಗ್ರೆಸಿಗರು ಮೂಗು ತೋರುವುದನ್ನು ಮೂದಲು ಬೀಡಬೇಕು ಎಂದು  ಆರ್ ಅಶೋಕ್ ಟಾಂಗ್ ನೀಡಿದರು.

ನಳಿನ್ ಕುಮಾರ್ ಕಟೀಲ್ ಪ್ರಮಾಣಿಕ ರಾಜ್ಯಾಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಇವರದ್ದು ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ಸಿಗರು ಮಾಡಿದ ಕುತಂತ್ರದ ಕೆಲಸವಾಗಿದೆ ಎಂದು ಆರೋಪಿಸಿದರು.

Key words: Minister- R. Ashok –Tong- MB Patil-cm BS Yeddyurappa