ಬೆಂಗಳೂರು,ಜೂನ್,11,2026 (www.justkannada.in): ಬೆಂಗಳೂರಿನಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ರೂ. ಅಕ್ರಮ ಆಗಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸುಮ್ಮನೆ ಹಿಟ್ ಅಂಡ್ ರನ್ ಮಾಡಬೇಡಿ. ನಿಮ್ಮ ಬಳಿ ದಾಖಲೆ ಇದ್ದರೆ ಮಾಧ್ಯಮಗಳ ಮುಂದೆ ಬಿಚ್ಚಿಡಿ. ನೀವು ಮಂತ್ರಿಯಾಗಿದ್ದಾಗಲೇ ಮಾಫಿಯಾ ಬೆಳೆಸಿದ್ದು ಎಂದು ಚಾಟಿ ಬೀಸಿದರು.
ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುದಾನ ತಾರತಮ್ಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲಾ ಸಮುದಾಯಕ್ಕೂ ಅನುದಾನ ಒದಗಿಸುವ ಕೆಲಸ ಸರ್ಕಾರದ್ದು. ಯಾವುದೇ ಒಂದು ಸಮುದಾಯದ ಸರ್ಕಾರವಲ್ಲ ಸಹಜವಾಗಿ ಕೆಲ ಸಂದರ್ಭದಲ್ಲಿ ಒಂದು ಸಮುದಾಯಕ್ಕೆ ಹೆಚ್ಚು ಸಿಗುತ್ತೆ ಇನ್ನುಳಿದ ಸಮುದಾಯಕ್ಕೆ ಕಡಿಮೆ ಅನುದಾನ ಸಿಗುತ್ತೆ. ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಢುವ ಉದ್ದೇಶವಿಲ್ಲ. ಮುಂದಿನ ವರ್ಷ ಬೇರೆ ಸಮುದಾಯಕ್ಕೆ ಹೆಚ್ಚು ಅನುದಾನ ಸಿಗಬಹದು ಎಂದರು.
Key words: record, Minister, Priyank Kharge, R. Ashok







