ಬೆಂಗಳೂರು, ಡಿಸೆಂಬರ್, 26,2025 (www.justkannada.in): ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಗೊಂದಲ ವಿಚಾರ ಸಂಬಂಧ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪಕ್ಷದಲ್ಲಿ ಗೊಂದಲ ಇರುವುದು ಸರಿಯಲ್ಲ. ಒಂದು ಮನೆ ಅಂದ ಮೇಲೆ ಗೊಂದಲ ಇದ್ದೇ ಇರುತ್ತೆ ಅಲ್ಲವಾ? ಎಲ್ಲರ ಮನೆ ದೋಸೆನೂ ತೂತೇ. ನಾವು ಸರಿಪಡಿಸಿಕೊಳ್ಳುತ್ತೇವೆ. ಬಿಜೆಪಿಯವರು ಯಾಕೆ ಟೆನ್ಷನ್ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಈಗಾಗಲೇ ಹೈಕಮಾಂಡ್ ನಿರ್ಧಾರ ಮಾಡುವುದಾಗಿ ಹೇಳಿದೆ. ಎಲ್ಲರೂ ಕೂಡ ಹೈಕಮಾಂಡ್ ಮಾತಿಗೆ ಒಪ್ಪಿದ್ದಾರೆ ಅಲ್ಲವಾ? ನಾವು ಕೂಡ ಹೈಕಮಾಂಡ್ ನತ್ತ ಬೊಟ್ಟು ಮಾಡುವುದು ಸರಿಯಲ್ಲ ಕರೆದು ಮಾತನಾಡುವುದಾಗಿ ಖರ್ಗೆಯವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಪಕ್ಷಕ್ಕಾಗಿ ಎಲ್ಲವನ್ನು ಮಾಡಿದ್ದೇನೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಡಿಕೆ ಶಿವಕುಮಾರ್ ತಾವು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಆರಂಭದ ದಿನದಿಂದಲೂ ಅವರು ನಡೆದು ಬಂದಿದ್ದನ್ನು ಹೇಳಿದ್ದಾರೆ. ಲಕ್ಷಾಂತರ ಜನ ಕೆಲಸ ಮಾಡಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿದರು.
Key words: confusion, Congress, party, Minister, Priyank Kharge







