ನನ್ನ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳಿಗೆ ನೇಮಕಾತಿ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಫೆಬ್ರವರಿ,25,2026 (www.justkannada.in):  ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ನಿನ್ನೆ ಧಾರವಾಡದಲ್ಲಿ ನಡೆದ ಬೃಹತ್ ಹೋರಾಟ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್,  ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಹುದ್ದೆಗಳ ಭರ್ತಿ ಮಾಡಿದ್ದಾರೆ. ಖಾಲಿ ಹುದ್ದೆಗಳ ಭರ್ತಿ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ರಾಜ್ಯಪಾಲರ ಅಂಕಿತ ಬಳಿಕ ನಾವು ನೇಮಕಾತಿ ಪ್ರಕ್ರಿತೆ ಮಾಡುತ್ತೇವೆ ಎಂದರು.

ನನ್ನ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡುತ್ತೇವೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.  9 ಸಾವಿರ ಹದ್ದೆಗಳಿಗೆ ನೇಮಕಾತಿ ಶುರುವಾಗಲಿದೆ.  ಈಗ ಒಳಮೀಸಲಾತಿ ವಿಚಾರ ಬಂತು ಎಲ್ಲವೂ ನಿಂತಿದೆ ಎಂದು ಪರಮೇಶ್ವರ್ ತಿಳಿಸಿದರು.

Key words: Recruitment, 4,000 posts, my department, Minister, Parameshwar