Thursday, August 27, 2026

BDA Apartments

Home Front Page ಬೃಹತ್ ಸಭೆ-ಸಮಾರಂಭಗಳು, ಕಾರ್ಯಕ್ರಮಗಳಿಗೆ ಎಸ್​ ಒಪಿ: ಗೃಹ ಸಚಿವ ಪರಮೇಶ್ವರ್

ಬೃಹತ್ ಸಭೆ-ಸಮಾರಂಭಗಳು, ಕಾರ್ಯಕ್ರಮಗಳಿಗೆ ಎಸ್​ ಒಪಿ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು, ಜೂನ್, 5,2025 (www.justkannada.in): ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಬೃಹತ್ ಸಭೆ-ಸಮಾರಂಭಗಳು, ಕಾರ್ಯಕ್ರಮಗಳು, ಸಂಭ್ರಮಾಚರಣೆಗಳಿಗೆ ಎಸ್​​ಒಪಿ ರೂಪಿಸಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ಆರ್​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇಂಥ ಬೃಹತ್ ಕಾರ್ಯಕ್ರಮಗಳಿಗೆ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ರೂಪಿಸಲು ಮುಂದಾಗಿದೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್,  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲಿದ್ದೇವೆ. ಲೋಪಗಳನ್ನು ಗುರುತಿಸಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಘಟನೆಯಲ್ಲಿ 11 ಜನ ಮೃತಪಟ್ಟರೆ  56 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 46 ಜನರು ಚಿಕಿತ್ಸೆಯ ನಂತರ ಮನೆಗೆ ಮರಳಿದ್ದಾರೆ, 10 ಜನರು ಆಸ್ಪತ್ರೆಯಲ್ಲಿದ್ದಾರೆ ಮತ್ತು ವೈದ್ಯರ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಇಂತಹ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ, ಗೃಹ ಇಲಾಖೆ ಹೊಸ ಎಸ್​​ಒಪಿ ರೂಪಿಸಲಿವೆ. ಇನ್ನು ಮುಂದೆ ಯಾವುದೇ ಬೃಹತ್ ಕಾರ್ಯಕ್ರಮಗಳು, ಸಭೆಗಳು ಮತ್ತು ಆಚರಣೆಗಳನ್ನು ಪೊಲೀಸ್ ಇಲಾಖೆ ಹೊರಡಿಸಿದ ನಿರ್ದೇಶನಗಳ ಚೌಕಟ್ಟಿನೊಳಗೆ ನಡೆಸಬೇಕೆಂದು ನಾವು ಸೂಚನೆಗಳನ್ನು ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.vtu

Key words: SOP,  large gatherings, ceremonies, programs, Minister, Parameshwar