Saturday, August 22, 2026

BDA Apartments

Home Front Page ಸಚಿವ ಮುರುಗೇಶ್ ನಿರಾಣಿ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ ಖದೀಮರು

ಸಚಿವ ಮುರುಗೇಶ್ ನಿರಾಣಿ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ ಖದೀಮರು

ಬೆಂಗಳೂರು, ಸೆಪ್ಟೆಂಬರ್ 07, 2021 (www.justkannada.in): ಸಚಿವ ಮುರುಗೇಶ್ ನಿರಾಣಿ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ದುರುಪಯೋಗ ಮಾಡಿಕೊಂಡಿದ್ದಾರೆ.

ಈ ಸಂಬಂಧ ಸಚಿವರು ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್ ಬಿ ಖಾತೆಯನ್ನು ಹ್ಯಾಕ್ ಮಾಡಿರುವ ಖದೀಮರು, ಹಣದ ಬೇಡಿಕೆ ಈಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡುವುದಾಗಿಯೂ ನಿರಾಣಿ ಎಚ್ಚರಿಕೆ ನೀಡಿದ್ದಾರೆ.

ತಾವು ಹಣದ ಸಹಾಯ ಕೇಳಿತ್ತಿದ್ದೇನೆಂದು ಸುಳ್ಳು ವದಂತಿ ಹಬ್ಬಿಸಿದ್ದು, ತಮ್ಮ ಗಮನಕ್ಕೆಬಂದಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಯಾರೂ ನಂಬಿ ವಂಚನೆಗೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ನಖಲಿ ಖಾತೆಯನ್ನು ತೆರೆದು ರಿಕ್ವೆಸ್ಟ್ ಕಳುಹಿಸಿ ಹಣ ಕೇಳುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ.