ರಾಜ್ಯದಲ್ಲಿ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಸಮರ್ಥಿಸಿಕೊಂಡ ಸಚಿವ ಮುರಗೇಶ್ ನಿರಾಣಿ.

ಮೈಸೂರು,ಫೆಬ್ರವರಿ,4,2022(www.justkannada.in): ರಾಜ್ಯದಲ್ಲಿ ಪಂಚಮಶಾಲಿ ಮೂರನೇ ಪೀಠ ಸ್ಥಾಪನೆಯನ್ನ ಸಚಿವ ಮುರಗೇಶ್ ನಿರಾಣಿ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಎರಡು ಪೀಠಗಳ ಸ್ವಾಮೀಜಿಗಳ ಒತ್ತಡ ಕಡಿಮೆ ಮಾಡಲು ಈ ಪೀಠದ ಅಗತ್ಯ ಇದೆ. ಆದರೆ ಈ ಪೀಠದ ಸ್ಥಾಪನೆ ಹಿಂದೆ ನಾನಿಲ್ಲ. ಆದರೆ ನನ್ನ ಸಂಪೂರ್ಣ ಬೆಂಬಲ ಇದಕ್ಕೆ ಇದೆ. ವಚನಾನಂದ ಸ್ವಾಮೀಜಿ ಸೇರಿ ಹಲವರು ಇದರ ಬೆಂಬಲಕ್ಕೆ ಇದ್ದಾರೆ. ಪೀಠ ಸ್ಥಾಪನೆಯ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ. ಸಮುದಾಯದ ಜನಸಂಖ್ಯೆ ಹೆಚ್ಚಿರುವ ಕಾರಣ ಮೂರನೇ ಪೀಠ ಅವಶ್ಯಕತೆ ಇದೆ. ಧಾರ್ಮಿಕ ಕಾರ್ಯಕ್ರಮ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮೂರನೇ ಪೀಠ ಸ್ಥಾಪನೆ ಮಾಡಲಾಗಿದೆ. ಪೀಠ ಸ್ಥಾಪನೆಯ ಯಾವುದೇ ಸಭೆ ಸಮಾರಂಭಕ್ಕೆ‌ ನಾನು ಹೋಗಿಲ್ಲ ಎಂದು ಹೇಳಿದರು.

ಮೂರನೇ ಪೀಠದ ಸ್ಥಾಪನೆ ವಿವಾದ ಸಂಬಂಧ ಈ ಬಗ್ಗೆ ನಾನೇ ಖುದ್ದಾಗಿ ಸ್ವಾಮೀಜಿಯನ್ನು ಭೇಟಿ ಮಾಡುವುದಿಲ್ಲ. ಅವರು ಕರೆದರೆ ನಾನು ಹೋಗಿ ಮಾತನಾಡುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಮಠಕ್ಕೆ ಕೊಟ್ಟಿರುವ ಕಾಣಿಕೆ ವಾಪಸ್ಸು ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮುರುಗೇಶ್ ನಿರಾಣಿ,  ನಾನು ಕಾಣಿಕೆಯನ್ನು ಸ್ವಾಮೀಜಿಗೆ ಕೊಟ್ಟಿಲ್ಲ. ನಾನು ಕೊಟ್ಟಿರುವು ಪೀಠಕ್ಕೆ. ಕೊಟ್ಟಿರುವುದುನ್ನು ವಾಪಸ್ಸು ಕೇಳುವಷ್ಟು ಸಣ್ಣವನು ನಾನಲ್ಲ. ಇಂತಹ ಮನಸ್ಥಿತಿ ನನಗೆ ಇಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಅದೇ ರೀತಿ ನಾನು ಪೀಠಕ್ಕೆ ನನ್ನ ಕೈಲಾದದನ್ನು ನೀಡಿದ್ದೇನೆ. ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿದರೂ ನಾನು ಸ್ಪಷ್ಟನೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಿರಾಣಿ ಸಹೋದರನಿಂದ ಧಮ್ಮಿ ವಿಚಾರ ಸಂಬಂಧ ಇದು ಸತ್ಯಕ್ಕೆ ದೂರವಾದ ಆರೋಪ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ತೋರಿಸುವ ಗಾಂಧಿ ತತ್ವ ನಮ್ಮ ಮನೆಯ ಸಂಸ್ಕಾರ. ಇದರಲ್ಲಿ ಧಮ್ಕಿ ಹಾಕು ಪ್ರಶ್ನೆಯೇ ಇಲ್ಲ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮುರುಗೇಶ್ ನಿರಾಣಿ, ಅದು ಸಿಎಂ ಪರಮಾಧಿಕಾರ ಅದರಲ್ಲಿ ನಮ್ಮ ಪಾತ್ರ ಇಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಬೊಮ್ಮಾಯಿ ಅವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಇದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಿ ಸಿಎಂ ಬದಲಾವಣೆ ವಿಚಾರ ಕೇವಲ ಊಹಾಪೋಹ. ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಪಡೆದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: Minister -Muragesh Nirani-mysore