ಬಿಜೆಪಿಯವರಿಂದ ಹಿಜಾಬ್ ವಿವಾದ: ಪ್ರಿನ್ಸಿಪಾಲ್ ವಿದ್ಯಾರ್ಥಿನಿಯರನ್ನ ತಡೆದಿದ್ದು ಸಂವಿಧಾನ ವಿರೋಧ –ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಫೆಬ್ರವರಿ,4,2022(www.justkannada.in):  ಬಿಜೆಪಿಯವರೇ ಹಿಜಾಬ್ ವಿವಾದ ಉಂಟು ಮಾಡಿಸುತ್ತಿದ್ದಾರೆ. ಸಮವಸ್ತ್ರ ಕಡ್ಡಾಯ ಅಂತಾ ಎಲ್ಲೂ ಹೇಳಿಲ್ಲ. ನಿನ್ನೆ ಪ್ರಿನ್ಸಿಪಾಲ್ ವಿದ್ಯಾರ್ಥಿನಿಯರನ್ನ ತಡೆದಿದ್ದು ಸಂವಿಧಾನ ವಿರೋಧ ಎಂದು ವಿಪಕ್ಷ ನಾಯಕ ಸಿದ‍್ಧರಾಮಯ್ಯ ಕಿಡಿಕಾರಿದರು.

ಹಿಜಾಬ್ ವಿವಾದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಕೇಸರಿ ಶಾಲು ಧರಿಸಿದವರ ವಿರುದ್ಧ ಕ್ರಮ ಜರುಗಿಸಿಲ್ಲ  ಬಿಜೆಪಿಯವರು ಹಿಜಾಬ್ ವಿವಾದ ಮಾಡಿಸುತ್ತಿದ್ದಾರೆ. ಬಿಜೆಪಿಯವರು ಬೇಕಂತಲೇ ಕೇಸರಿ ಶಾಲು ಹಾಕಿಸಿದ್ದಾರೆ. ವಿಷಯಾಂತರ ಮಾಡಲು ಹೊರಟಿದಿದ್ದಾರೆ.  ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂಬ ಹುನ್ನಾರ. ಹಿಜಾಬ್ ಧರಿಸೋದು ಅವರ ಧಾರ್ಮಿಕ ನಿಯಮ. ಅದನ್ನ ಪ್ರಿನ್ಸಿಪಾಲ್ ತಡೆಯೋದು ಸರಿಯೇ..? ಎಂದು ಪ್ರಶ್ನಿಸಿದರು.

ರಘುಪತಿ ಭಟ್ ಸಮವಸ್ತ್ರ ಕಡ್ಡಾಯ ಅಂದ್ರಂತೆ ಅವನ್ಯಾರು ಸಮವಸ್ತ್ರ ಕಡ್ಡಾಯ ಮಾಡೋಕೆ..?  ಪ್ರಿನ್ಸಿಪಾಲ್ ಗೇಟ್ ಹಾಕಿರುವುದು ಅಮಾನವೀಯ. ಕೇಸರಿ ಶಾಲು ಹಾಕಿಕೊಂಡಿರುವ ಉದ್ಧೇಶವೇನು.   ಅರಗ ಜ್ಞಾನೇಂದ್ರ ರಾಜಕೀಯವಾಗಿ ಹೇಳುತ್ತಿದ್ದಾರೆ ಎಂದು ಸಿದ‍್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

Key words: Hijab -controversy – BJP- Siddaramaiah.