ಬೆಂಗಳೂರು,ಜನವರಿ,12,2026 (www.justkannada.in): ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಜನವರಿ 17 ರಂದು ಬಳ್ಳಾರಿ ಟು ಬೆಂಗಳೂರು 300 ಕಿ.ಮೀ ಪಾದಯಾತ್ರೆಗೆ ಸಿದ್ದತೆ ನಡೆಸಿದ್ದು ಇದನ್ನು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ನಾಯಕರಿಂದ ಬಳ್ಳಾರಿ ಪಾದಯಾತ್ರೆ ಅದು ಅಕ್ರಮ ಪಾದಯಾತ್ರೆ. ಜನಾರ್ಧನ ರೆಡ್ಡಿ ಸಚಿವರಾಗಿದ್ದಾಗ ಅವರ ಟೀಂ ಗಡಿ ಕಿತ್ತು ಹಾಕಿತ್ತು. ಪ್ರಭಾವಿ ದೇವಸ್ಥಾನವನ್ನ ಒಡೆದು ಹಾಕಿದ್ದರು. ತಮ್ಮ ದುರಾಸೆಗೆ ರೆಡ್ಡಿ ರಿಪಬ್ಲಿಕ್ ಬಳ್ಳಾರಿ ಮಾಡಿದ್ದರು ಹೀಗಾಗಿ ಅವರ ವಿರುದ್ದ ನಾವು ಪಾದಯಾತ್ರೆ ಮಾಡಿದ್ದವು. ಈಗ ಬಿಜೆಪಿಯವರು ಗಲಾಟೆಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಳ್ಳಾರಿ ಗಲಾಟೆ ಪ್ರಕರಣ ಸಿಬಿಐಗೆ ಕೊಡಬೇಕು. ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬಂಧನ ಆಗಬೇಕು ಎಂದು ಪಟ್ಟು ಹಿಡಿದು ಬಿಜೆಪಿ ನಾಯಕರು ಪಾದಯಾತ್ರೆಗೆ ಮುಂದಾಗಿದ್ದಾರೆ.
Key words: BJP leaders, Padayatra, Minister, M.B. Patil







