Tuesday, September 8, 2026

BDA Apartments

Home Front Page ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ PSLV-C62 ರಾಕೆಟ್

ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ PSLV-C62 ರಾಕೆಟ್

ಶ್ರೀಹರಿಕೋಟಾ,ಜನವರಿ,12,2026 (www.justkannada.in): ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO)  ಮತ್ತೊಂದು ಮಹತ್ವದ ಮೈಲಿಗಲ್ಲುಸಾಧಿಸಿದ್ದು, PSLV-C62 ರಾಕೆಟ್ ಮೂಲಕ EOS-N1 ‘ಅನ್ವೇಷಾ ಸೇರಿ 16 ಉಪಗ್ರಹಗಳನ್ನ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C62 ರಾಕೆಟ್ ಮೂಲಕ EOS-N1 ‘ಅನ್ವೇಷಾ’ ಉಪಗ್ರಹ ಸೇರಿ 16 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಭೂವೀಕ್ಷಣಾ ಉಪಗ್ರಹಗಳು ನಭಕ್ಕೆ ಹಾರಿವೆ.

DRDO ಅಭಿವೃದ್ಧಿಪಡಿಸಿದ ಈ ಹೈಪರ್‌ಸ್ಪೆಕ್ಟ್ರಲ್ ಭೂ-ವೀಕ್ಷಣಾ ಉಪಗ್ರಹವು ಕಣ್ಗಾವಲು ಮತ್ತು ರಕ್ಷಣಾ ಉದ್ದೇಶಗಳಿಗೆ ಅತ್ಯಂತ ಪ್ರಮುಖವಾಗಿದೆ. ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿರುವ ಅನ್ವೇಷಾ, ವಸ್ತುಗಳ ಬಣ್ಣ ಮಾತ್ರವಲ್ಲದೆ ಅವುಗಳ ‘ಸ್ಪೆಕ್ಟ್ರಲ್ ಸಿಗ್ನೇಚರ್’ ಅನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ರಕ್ಷಣೆಯ ಹೊರತಾಗಿ ಕೃಷಿ, ಮಣ್ಣಿನ ತೇವಾಂಶ, ಮಾಲಿನ್ಯ ಮೇಲ್ವಿಚಾರಣೆ ಹಾಗೂ ಖನಿಜ ಸಂಪನ್ಮೂಲ ಗುರುತಿಸುವಲ್ಲಿಯೂ ಈ ಉಪಗ್ರಹ ಬಳಕೆಯಾಗಲಿದೆ.

Key words: Another, milestone , ISRO, PSLV-C62 rocket, launched